ಕಾರಿಗೆ ಡಿಕ್ಕಿಯಾಗಿ ಟ್ರಕ್ ಗೆ ಸಿಲುಕಿ ತಲೆ ಮೇಲೆ ಚಕ್ರ ಹರಿದ್ರೂ ಮಹಿಳೆ ಬಚಾವ್!

– ಹೆಲ್ಮೆಟ್ ಹಾಕಿದ್ದರಿಂದ ಪಾರಾದ್ರು

ಬೀಜಿಂಗ್: ಅಪಘಾತದ ವೇಳೆ ಹೆಚ್ಚಿನ ಬೈಕ್ ಸವಾರರು ಹೆಲ್ಮೆಟ್ ಇಲ್ಲದೇ ಪ್ರಾಣ ಕಳೆದುಕೊಳ್ಳುವುದು ಜಾಸ್ತಿ. ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಹೆಲ್ಮೆಟ್ ಹಾಕಿದ್ದರಿಂದ ಬದುಕುಳಿದಿದ್ದಾರೆ.

ಝೂ, ಬೈಕ್ ಸವಾರೆಯಾಗಿದ್ದು, ಈಕೆ ತನ್ನ ಬೈಕ್ ನಲ್ಲಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಪಕ್ಕದಲ್ಲಿ ಹೋಗುತ್ತಿದ್ದ ಟ್ರಕ್‍ಗೆ ಸಿಲುಕಿ ಚಕ್ರ ತಲೆ ಮೇಲೆ ಹರಿದಿದೆ. ಆದರೆ ಅದೃಷ್ಟವಶಾತ್ ಮಹಿಳೆ ಹೆಲ್ಮೆಟ್ ಹಾಕಿದ್ದರಿಂದ ಯಾವುದೇ ಅಪಾಯವಿಲ್ಲದೇ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಭಯಾನಕ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಹಿಳೆ ಬೈಕ್ ನಲ್ಲಿ ವೇಗವಾಗಿ ಕಾರಿನ ಪಕ್ಕದಲ್ಲೇ ಬಂದಿದ್ದು, ಈ ವೇಳೆ ಕಾರಿನಲ್ಲಿದ್ದ ಪ್ರಯಾಣಿಕ ಹಿಂದೆ ಬೈಕ್ ಬರುವುದನ್ನು ಗಮನಿಸದೆ ಕಾರ್ ಬಾಗಿಲು ಓಪನ್ ಮಾಡುತ್ತಾರೆ. ಈ ವೇಳೆ ಕಾರಿನ ಬಾಗಿಲಿಗೆ ಬೈಕ್ ಡಿಕ್ಕಿಯಾಗಿದೆ. ಅಲ್ಲದೇ ಮಹಿಳೆಯ ಪಕ್ಕದಲ್ಲಿ ಚಲಿಸುತ್ತಿದ್ದ ಟ್ರಕ್ ಚಕ್ರದಡಿ ಹಾರಿ ಬೀಳುತ್ತಾರೆ. ಈ ವೇಳೆ ಟ್ರಕ್ ಚಕ್ರ ಹೆಲ್ಮೆಟ್ ಹಾಕಿದ್ದ ಝೂ ತಲೆ ಮೇಲೆ ಹರಿದು ಹೋಗುತ್ತದೆ. ಆದರೆ ಅದೃಷ್ಟವಶಾತ್ ಝೂಗೆ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಲವು ಬಾರಿ ಪ್ರಯಾಣಿಕರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿ ಅಪಘಾತದ ವೇಳೆ ತಮ್ಮ ಪ್ರಾಣ ಕಳೆದುಕೊಂಡಿದ್ದು, ಹೆಲ್ಮೆಟ್ ಹಾಕಿ ಬೈಕ್ ಚಾಲನೆ ಮಾಡುವುದರಿಂದ ಅಪಘಾತದಿಂದ ಉಂಟಾಗುವ ಭಾರೀ ನಷ್ಟವನ್ನು ತಡೆಯಬಹುದಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *