ಯಶ್ ಜೊತೆ ಡ್ಯಾನ್ಸ್ ಮಾಡಿ ರಾಕಿಂಗ್ ಸ್ಟಾರ್ ಬಗ್ಗೆ ತಮನ್ನಾ ಟ್ವೀಟ್!

ಬೆಂಗಳೂರು: ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಡ್ಯಾನ್ಸ್ ಮಾಡಿದ ಬಹುಭಾಷಾ ನಟಿ ತಮನ್ನಾ ಭಾಟಿಯಾ ರಾಕಿಂಗ್ ಸ್ಟಾರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಯಶ್ ಜೊತೆ ತಮನ್ನಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಈ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ತಮನ್ನಾ ಯಶ್ ಜೊತೆ ಡ್ಯಾನ್ಸ್ ಮಾಡಿದ ಫಸ್ಟ್ ಲುಕ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

“ಯಶ್ ಜೊತೆ ಜೋಕೆ ಹಾಡಿಗೆ ಚಿತ್ರೀಕರಣ ಮಾಡುವಾಗ ಒಳ್ಳೆಯ ಸಮಯ ಕಳೆದಿದ್ದೇನೆ. ಇಡೀ ಚಿತ್ರತಂಡ ನನಗೆ ಮನೆಯ ಅನುಭವವನ್ನು ನೀಡಿತು. ಎಲ್ಲರಿಗೂ ಧನ್ಯವಾದ. ಸದ್ಯ ಎಲ್ಲರೂ ಕೆಜಿಎಫ್ ಚಿತ್ರವನ್ನು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ನೋಡಲು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಭೇಟಿ ನೀಡಿ” ಎಂದು ಟ್ವೀಟ್ ಮಾಡಿದ್ದಾರೆ.

ಕೆಜಿಎಫ್ ಸಿನಿಮಾದಲ್ಲಿ ಹಳೆಯ ಹಾಡು `ಜೋಕೆ ನಾನು ಬಳ್ಳಿಯ ಮಿಂಚು’ ಹಾಡಿಗೆ ತಮನ್ನಾ ಸೊಂಟ ಬಳುಕಿಸಿದ್ದಾರೆ. 1970ರಲ್ಲಿ ಬಿಡುಗಡೆಯಾದ `ಪರೋಪಕಾರಿ’ ಸಿನಿಮಾದಲ್ಲಿ ಈ ಹಾಡು ಇದೆ. ಈ ಹಾಡು ಇಂದಿಗೂ ಟ್ರೆಂಡ್ ಆಗಿದ್ದು, ಕೆಜಿಎಫ್ ಸಿನಿಮಾದಲ್ಲಿ ರೀ-ಕ್ರಿಯೇಟ್ ಮಾಡಲಾಗುತ್ತಿದೆ. ಈ ಹಾಡಿಗೆ ಯಶ್ ಮತ್ತು ತಮನ್ನಾ ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಅನೇಕ ದಿನಗಳಿಂದ ಐಟಂ ಹಾಡಿಗೆ ನೃತ್ಯ ಮಾಡಲು ನಟಿಯರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಈ ಹಿಂದೆ ಕಾಜಲ್ ಅಗರ್ವಾಲ್, ಲಕ್ಷ್ಮಿ ರೈ, ತಮನ್ನಾ ಹಾಗೂ ನೊರಾ ಫತೇಹಿ ನಟಿಯರಲ್ಲಿ ಒಬ್ಬರು ಯಶ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಈಗ ಇವರಲ್ಲಿ ತಮನ್ನಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂದು ಕೆಜಿಎಫ್ ಚಿತ್ರದ ನಿರ್ದೇಶನ ಟ್ವೀಟ್ ಮಾಡಿದ್ರು.

ತಮನ್ನಾ ಈ ಹಿಂದೆ ನಟ ನಿಖಿಲ್ ಕುಮಾರ್ ಅಭಿನಯದ `ಜಾಗ್ವಾರ್’ ಸಿನಿಮಾದ ಹಾಡಿನಲ್ಲಿ ಅಭಿನಯಿಸಿದ್ದರು. ಈಗ ಯಶ್ ಜೊತೆ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಬಾರಿಗೆ ಅಭಿನಯಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.

Comments

Leave a Reply

Your email address will not be published. Required fields are marked *