ನಂದಿಗಿರಿಧಾಮದಲ್ಲಿದ್ದ ಅಕ್ರಮ ನಂದಿಫುಡ್ ಕೋರ್ಟ್ ಎತ್ತಂಗಡಿ

ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ನಂದಿಫುಡ್ ಕೋರ್ಟ್ ಅಂಗಡಿಯನ್ನು ಅಧಿಕಾರಿಗಳು ತೆರುವುಗೊಳಿಸಿದ್ದಾರೆ.

ವಿಶ್ವ ಪ್ರಸಿದ್ಧ ಪ್ರವಾಸಿ ತಾಣವೊಂದರಲ್ಲಿ ಸರ್ಕಾರಿ ಹೊಟೇಲ್ ಕಟ್ಟಡ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನೊಬ್ಬ ಗುತ್ತಿಗೆ ಅವಧಿ ಮುಗಿದು 15 ತಿಂಗಳು ಕಳೆದರೂ ಸ್ಥಳ ಖಾಲಿ ಮಾಡದೇ ದಬ್ಬಾಳಿಕೆ ನಡೆಸುತ್ತಾ ವ್ಯಾಪಾರ ನಡೆಸುತ್ತಿದ್ದ. ಕೊನೆಗೆ ಹೈಕೋರ್ಟ್ ಆದೇಶದ ಮೆರೆಗೆ ಅಧಿಕಾರಿಗಳು ನಂದಿಫುಡ್ ಕೋರ್ಟ್ ನಲ್ಲಿದ್ದ ಸರಕು ಸಾಮಾನುಗಳನ್ನು ಹೊರಕ್ಕೆ ಎಸೆದು ಖಾಲಿ ಮಾಡಿಸಿದ್ದಾರೆ.

ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ನಂದಿಬೆಟ್ಟ ಸುಂದರ, ತಂಪಾದ ವಾತಾವರಣಕ್ಕೆ ಹೆಸರು ಪಡೆದಿದೆ. ಅದ್ದರಿಂದ ಇಲ್ಲಿನ ಗಿರಿಧಾಮಕ್ಕೆ ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶದ ಮಂದಿ ಭೇಟಿ ನೀಡುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ನಂದಿಫುಡ್ ಕೋರ್ಟ್ ಎಂಬ ಹೋಟೆಲ್ ಆರಂಭಿಸಿ ಗುತ್ತಿಗೆ ನೀಡಿತ್ತು. ಆದರೆ 2017 ರಲ್ಲಿಯೇ ಗುತ್ತಿಗೆ ಅವಧಿ ಮುಗಿದರು ಹೋಟೆಲ್ ಮಾಲೀಕ ಸ್ಥಳ ಬಿಟ್ಟುಕೊಡದೆ ಅಧಿಕಾರಿಗಳ ವಿರುದ್ಧವೇ ದೌರ್ಜನ್ಯ ನಡೆಸುತ್ತಿದ್ದ.

ಸರ್ಕಾರಿ ನಿಯಮಗಳ ಅನ್ವಯ ಇಲಾಖೆ ನೂತನ ಗುತ್ತಿಗೆದಾರಿಗೆ ಅಂಗಡಿ ನೀಡಿತ್ತು. ಆದರೆ ಸ್ಥಳ ಖಾಲಿ ಮಾಡದ ಕಾರಣ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೊರ್ಟ್ ಅಧಿಕಾರಿಗಳಿಗೆ ನೋಟಿಸ್ ನೀಡಿ ತೆರವಿಗೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಹೋಟಲ್ ನಲ್ಲಿದ್ದ ಸರಕು ಸಾಮಾನುಗಳನ್ನು ಖಾಲಿ ಮಾಡಿದ್ದಾರೆ.

ದೇಶ-ವಿಧೇಶಗಳಿಂದ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರಿಂದ, ಮನಸ್ಸೊ ಇಚ್ಚೆ ಹಣ ವಸೂಲಿ ಮಾಡುತ್ತಾ ಹೋಟೆಲ್ ಉದ್ಯಮದಲ್ಲಿ ಕೈತುಂಬ ಕಾಸು ಮಾಡುತ್ತಿದ್ದ ಅಕ್ರಮ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *