ಅಳುತ್ತಿದ್ದ ಮಗುವಿಗೆ ಹಸೆಮಣೆಯಿಂದ ಎದ್ದು ಬಂದು ಎದೆ ಹಾಲುಣಿಸಿದ ವಧು!

ಲಕ್ನೋ: ಸಾಮೂಹಿಕ ವಿವಾಹವೊಂದರಲ್ಲಿ ಹಸೆಮಣೆ ಮೇಲೆ ಕುಳಿತ್ತಿದ್ದ ಮಧು ಮಗಳು ಅಳುತ್ತಿರುವ ಮಗುವಿಗೆ ಎದ್ದು ಬಂದು ಎದೆಹಾಲು ಉಣಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬುಧವಾರದಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಯೋಜನೆಯನ್ನು ಕುಶೀನಗರದಲ್ಲಿ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಹಸೆಮಣೆ ಮೇಲೆ ಕುಳಿತ ವಧು ತನ್ನ ಅಳುತ್ತಿದ್ದ ಮಗುವಿಗೆ ಎದೆಹಾಲುಣಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಈ ದಂಪತಿ ದೇವತಾಹಾದ ನಿವಾಸಿಯಾದ ಮಮ್ತಾ, ಖುನು ಚಪ್ರಾ ಪ್ರದೇಶದ ನಿವಾಸಿಯಾದ ಪ್ರದೀಪ್ ಎಂದು ಗುರುತಿಸಲಾಗಿದ್ದು, ಇವರಿಬ್ಬರಿಗೂ ಮದುವೆಯಾಗಿ 2 ವರ್ಷಗಳಾಗಿತ್ತು. ಮಂಟಪದಲ್ಲಿ ವಧುವರ ಹಸೆಮಣೆ ಮೇಲೆ ಕುಳಿತುಕೊಂಡಿದ್ದಾರೆ ಆ ವೇಳೆ ಮಂಟಪದ ಬಳಿ ವ್ಯಕ್ತಿ ಬಳಿ ಇದ್ದ ಮಗುವೊಂದು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಆಗ ವಧು ಕರುಳಿನ ಕುಡಿಯ ಅಳಲನ್ನು ನೋಡಲಾರದೇ ಎದ್ದು ಹೋಗಿ ಮಗುವಿಗೆ ಎದೆಹಾಲು ಉಣಿಸುತ್ತಾಳೆ ಅದನ್ನು ಕಂಡ ಜನರಿಗೆ ಈ ದಂಪತಿಗೆ ಮದುವೆಯಾಗಿ ಮಗುವಿದೆ ಎಂಬ ವಿಚಾರ ತಿಳಿಯುತ್ತದೆ.

ಕುಶೀನಗರದ ಸಮಾಜಕಲ್ಯಾಣ ಅಧಿಕಾರಿ ಟಿ.ಕೆ.ಸಿಂಗ್ ಈ ವಿಚಾರ ಕುರಿತು ತನಿಖೆ ನಡೆಸಿದಾಗ ದಂಪತಿಗಳು ಹಣ ಪಡೆಯಲು ಹೀಗೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ನಂತರ ಅವರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗುತ್ತದೆ.

ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ 20 ಸಾವಿರ ರೂ. ಹಣವನ್ನು ವಧುವಿನ ಖಾತೆಗೆ ಜಮೆಮಾಡಲಾಗುತ್ತದೆ. ಮತ್ತು ದಂಪತಿಗೆ 10 ಸಾವಿರ ರೂ. ಮೌಲ್ಯದ ಉಡುಗೊರೆ ನೀಡಲಾಗುತ್ತದೆ. ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದವರಿಗೆ 6 ಸಾವಿರ ರೂ. ಹಣವನ್ನು ನೀಡಲಾಗುತ್ತದೆ.

Comments

Leave a Reply

Your email address will not be published. Required fields are marked *