ಜೋ ರೂಟ್‍ಗೆ ತಿರುಗೇಟು ಕೊಟ್ಟ ವಿರಾಟ್ ಕೊಹ್ಲಿ – ವಿಡಿಯೋ ನೋಡಿ

ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಜೋ ರೂಟ್‍ರನ್ನು ರನ್ ಔಟ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಕೆಳಕ್ಕೆ ಎಸೆಯುವ ಸನ್ನೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಬುಧವಾರ ಆರಂಭವಾದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ 62 ಓವರ್ ವೇಳೆ ರನ್ ಕದಿಯಲು ಯತ್ನಿಸಿದ್ದ ಜೋ ರೂಟ್‍ರನ್ನು ಕೊಹ್ಲಿ ರನೌಟ್ ಮಾಡಿದ್ದರು. ಈ ವೇಳೆ ಟೀಂ ಇಂಡಿಯಾ ಆಟಗಾರರತ್ತ ಫ್ಲೈಯಿಂಗ್ ಕಿಸ್ ನೀಡಿದ ಕೊಹ್ಲಿ ಬ್ಯಾಟ್ ಕೆಳಕ್ಕೆ ಎಸೆಯುವ ಸನ್ನೆ ಮಾಡಿ ಟಾಂಗ್ ನೀಡಿದರು.

https://twitter.com/sukhiaatma69/status/1024692827492704256?

ಈ ಹಿಂದೆ ಇಂಗ್ಲೆಂಡ್ ವಿರುದ್ಧ ನಡೆದ ಸೀಮಿತ ಓವರ್ ಗಳ ಪಂದ್ಯಗಳ ವೇಳೆ ಜೋ ರೂಟ್, ಕೊಹ್ಲಿ ಎದುರು ಬ್ಯಾಟ್ ಎಸೆದು ಕಿಚಾಯಿಸಿದ್ದರು. ಸದ್ಯ ಕೊಹ್ಲಿ ಅವರದ್ದೇ ಶೈಲಿಯಲ್ಲಿ ಟಾಂಗ್ ನೀಡಿ ಕೆಣಕುವ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಜೋ ರೂಟ್ 80 ರನ್ ಗಳಿದ್ದ ವೇಳೆ ರನ್ ಕದಿಯಲು ಯತ್ನಿಸಿ ಔಟಾದರು. ಇದಕ್ಕೂ ಮುನ್ನ ರೂಟ್ ಮತ್ತು ಜಾನಿ ಬೇರ್ಸ್ಟೋವ್ ಜೋಡಿ 4ನೇ ವಿಕೆಟ್‍ಗೆ 104 ರನ್ ಜೊತೆಯಾಟವಾಡಿದ್ದರು. ಆದರೆ ರೂಟ್ ವೃತ್ತಿ ಜೀವನದ 11ನೇ ಶತಕ ಸಿಡಿಸುವ ಅಂಚಿನಲ್ಲಿ ಎಡವಿದರು.

ಕೊಹ್ಲಿ ನಡೆ ಕುರಿತು ದಿನದಾಟದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೀಟನ್ ಜೆನ್ನಿಂಗ್ಸ್ ಪ್ರತಿಯೊಬ್ಬ ಆಟಗಾರು ತಮ್ಮದೇ ರೀತಿಯಲ್ಲಿ ಸಂಭ್ರಮ ನಡೆಸುತ್ತಾರೆ. ಕೊಹ್ಲಿ ಸದ್ಯ ಅವರ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಅದು ಉತ್ತಮವಾಗಿತ್ತು ಎಂದು ಹೇಳಿದ್ದಾರೆ. ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯ ಇಂಗ್ಲೆಂಡ್ ತಂಡದ ಪಾಲಿಗೆ ಐತಿಹಾಸಿಕ 1 ಸಾವಿರನೇ ಪಂದ್ಯವಾಗಿದ್ದು, ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

Comments

Leave a Reply

Your email address will not be published. Required fields are marked *