ಮಾರಾಟಕ್ಕಿದೆ ಸಿಎಂ ಎಚ್‍ಡಿಕೆ ನೆಲೆಸಿದ್ದ ಹುಬ್ಬಳ್ಳಿ ನಿವಾಸ!

ಹುಬ್ಬಳ್ಳಿ: ನಗರದ ಮಾಯ್ಕರ್ ಕಾಲೋನಿ  ಸಿಎಂ ಕುಮಾರಸ್ವಾಮಿ ನೆಲೆಸಿದ್ದ ಮನೆಯನ್ನು  ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ.

ಹೌದು, ಸಿಎಂ ಕುಮಾರಸ್ವಾಮಿಯವರು 2016ರ ನವೆಂಬರ್ ನಲ್ಲಿ ನಗರದ ಮಾಯ್ಕರ್ ಕಾಲೋನಿಯ ನಿವಾಸವನ್ನು ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದ ಮನೆ ಮತ್ತು ಕಚೇರಿಯನ್ನು ಮಾಲೀಕರು ಇಂದು ಮಾರಾಟಕ್ಕಿಟ್ಟಿದ್ದಾರೆ.

10 ಸಾವಿರ ಚದರಡಿಯ ನಾಲ್ಕು ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಹಾಗೂ ಖಾಸಗಿ ಕಚೇರಿಯ ಮಾಲೀಕರಾದ ಸುರೇಶ್ ರಾಯರೆಡ್ಡಿಯವರು ಮಾರಾಟ ಮಾಡಲು ಮುಂದಾಗಿದ್ದು, ಶೀಘ್ರವೇ ಜಾಹೀರಾತು ನೀಡಲು ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮನೆಯ ಮಾಲೀಕರು, ನನ್ನ ವೈಯಕ್ತಿಕ ಕಾರಣದಿಂದಾಗಿ ಕುಮಾರಸ್ವಾಮಿಯವರು ಬಳಸುತ್ತಿದ್ದ ಮನೆ ಹಾಗೂ ಕಚೇರಿಯನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸಲು ಈ ಮನೆಯನ್ನು ಆರಿಸಿಕೊಂಡಿದ್ದರು.

ಒಟ್ಟು ನಾಲ್ಕು ಕೋಟಿ ರೂ.ಗೆ ಈ ನಿವಾಸವನ್ನು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.

Comments

Leave a Reply

Your email address will not be published. Required fields are marked *