ಶಿವ ವೇಷಧಾರಿಯಾದ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್

ಪಾಟ್ನಾ: ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿಯ ಪುತ್ರ ತೇಜ್ ಪ್ರತಾಪ್ ಶಿವ ವೇಷಧಾರಿಯಾಗಿ ಇಂದು ಈಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.

ದೇವಗಢನ ಬಾಬಾ ಆದಿತ್ಯನಾಥ ಧಾಮಕ್ಕೆ ತೆರಳುವ ಮುನ್ನ ಇಂದು ಶಿವನ ವೇಷಧಾರಿಯಾಗಿ ನಗರದ ಈಶ್ವರ ದೇವಾಲಯಕ್ಕೆ ಆಗಮಿಸಿದ್ರು. ದೇಗುಲದಲ್ಲಿ ಆಗಮಿಸುತ್ತಿದ್ದಂತೆ ಕೈಯಲ್ಲಿದ್ದ ಢಮರುಗ ಬಾರಿಸಿ, ಶಂಖ ಮೊಳಗಿಸಿ ತಮ್ಮ ಭಕ್ತಿಯನ್ನು ದೇವರಿಗೆ ಅರ್ಪಿಸಿದರು. ಶಿವನ ರೀತಿಯಲ್ಲಿ ಸೊಂಟಕ್ಕೆ ಹುಲಿ ಚರ್ಮದ ರೀತಿಯ ಬಟ್ಟೆ ಕಟ್ಟಿಕೊಂಡು, ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಕುಂಡಲ, ವಿಭೂತಿಧಾರಿಯಾಗಿ ದೇಗುಲಕ್ಕೆ ಆಗಮಿಸುತ್ತಿದ್ದಂತೆ ಬೆಂಬಲಿಗರು ಜೈಕಾರ ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ಪಾಟ್ನಾದಲ್ಲಿ ಪೂಜೆ ಸಲ್ಲಿಸಿದ ಬಳಿಕ ತೇಜ್ ಪ್ರತಾಪ್ ಯಾದವ್ ತಮ್ಮ ಬೆಂಬಲಿಗರೊಂದಿಗೆ ಬಾಬಾ ಬೈದ್ಯನಾಥ್ ಧಾಮಕ್ಕೆ ತೆರಳಿದರು. ಬಿಹಾರ ಮತ್ತು ಜಾರ್ಖಂಡ್ ರಾಜ್ಯದ ಜನರು ಆಷಾಢ ತಿಂಗಳಲ್ಲಿ ಬಾಬಾ ಬೈದ್ಯನಾಥ್ ಧಾಮಕ್ಕೆ ತೆರಳಿ ಲೋಕನಾಥನಿಗೆ ಜಲಾಭಿಷೇಕ ಮಾಡುತ್ತಾರೆ. ಈ ಹಿಂದೆ ಶ್ರೀಕೃಷ್ಣನ ಉಡುಪು ತೊಟ್ಟು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದ ತೇಜ್ ಪ್ರತಾಪ್ ಈಗ ಮತ್ತೊಮ್ಮೆ ಶಿವನ ವೇಷ ಧರಿಸಿ ಸುದ್ದಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಪತ್ರಿಭಟನೆ ನಡೆಸಲು ತೇಜ್ ಪ್ರತಾಪ್ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದರು. ಯಾತ್ರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಅಂತಿಮ ಹಂತದಲ್ಲಿ ಸೈಕಲ್ ಮೇಲಿಂದ ಉರುಳಿ ಬೀಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳು ವೈರಲ್ ಆಗುತ್ತಿದಂತೆ ತೇಜ್ ಪ್ರತಾಪ್, ಜೀವನದಲ್ಲಿ ಜನರು ಬೀಳುವುದು ಮತ್ತೆ ಹೆಚ್ಚಿನ ಶಕ್ತಿಯೊಂದಿದೆ ಮೇಲೆಳಲಿಕ್ಕೆ ಎಂದು ಸ್ಪಷ್ಟನೆ ನೀಡಿದ್ದರು.

Comments

Leave a Reply

Your email address will not be published. Required fields are marked *