ನಾನು ಮುಸ್ಲಿಂ, ಬಿಕಿನಿ ಧರಿಸ್ತೀನಿ, ಅದಕ್ಕೇನಿವಾಗ?: ಮಂದನಾ ಕರೀಮಿ

ಮುಂಬೈ: ನಾನು ಮುಸ್ಲಿಂ ಹುಡುಗಿ, ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿಕೊಳ್ತೀನಿ ಅದಕ್ಕೆ ಏನಿವಾಗ ಎಂದು ಬಿಗ್‍ಬಾಸ್ ಖ್ಯಾತಿಯ ನಟಿ ಮಂದನಾ ಕರೀಮಿ ಖಾರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ಹಾಟ್ ಫೋಟೋಗಳಿಂದಲೇ ಹೆಚ್ಚು ಟ್ರೋಲ್‍ಗೆ ಒಳಗಾಗುವ ನಟಿ ಮಂದನಾ. ಬಿಗ್‍ಬಾಸ್ ನಿಂದ ಹೊರ ಬಂದ ಮೇಲೆಯೂ ನಟಿಯ ಫೋಟೋ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟ್ರೋಲ್ ಮಾಡುತ್ತಾರೆ. ತಮ್ಮ ಟ್ರೋಲ್‍ಗೆ ಪ್ರತಿಕ್ರಿಯಿಸಿರುವ ಮಂದನಾ, ನನ್ನ ಫೋಟೋಗಳಿಗೆ ಬರುವ ಕಮೆಂಟ್‍ಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಕೆಲವೊಂದು ಸಾರಿ ಕಮೆಂಟ್ ಗಳಿಗೆ ಫನ್ನಿ ಉತ್ತರಗಳನ್ನು ನೀಡಿ, ನಕ್ಕು ಸುಮ್ಮನಾಗುತ್ತೇನೆ. ಟ್ರೋಲ್, ಕಮೆಂಟ್‍ಗಳಿಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾನು ಏನು? ಏನು ಮಾಡುತ್ತಿದ್ದೇನೆ ಎಂಬುದರ ತಿಳುವಳಿಕೆ ನನಗಿದೆ ಎಂದು ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.

ನಾವು ಚಿತ್ರರಂಗದಲ್ಲಿ ಇರೋದ್ರಿಂದ ಚಿತ್ರದ ಕಥೆಯ ಸನ್ನಿವೇಶಕ್ಕೆ ತಕ್ಕಂತೆ ಉಡುಪುಗಳನ್ನು ಧರಿಸಬೇಕು. ನಮಗೆ ಇದೇ ರೀತಿಯೇ ಬಟ್ಟೆ ತೊಡಬೇಕು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಕೆಲವರು ನಾವು ನಿಮ್ಮ ಅಭಿಮಾನಿಗಳಾಗಿದ್ದು, ನಮ್ಮ ಅಭಿಪ್ರಾಯವನ್ನು ಕಮೆಂಟ್ ತಿಳಿಸಲು ನಮಗೆ ಹಕ್ಕಿದೆ ಎಂದು ವಾದಿಸುತ್ತಾರೆ. ನೀವು ನನ್ನ ನಿಜವಾದ ಅಭಿಮಾನಿಗಳೇ ಆಗಿದ್ದರೆ, ನಾನು ಹೇಗೆ ಇದ್ದೇನೋ ಹಾಗೆ ಇಷ್ಟಪಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *