ಪ್ರೇಕ್ಷಕರ ಮನಸಿನ ತುಂಬಾ ಪ್ರಶ್ನೆಗಳ ಪಾದರಸ!

ಬೆಂಗಳೂರು: ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿರೋ ಪಾದರಸ ಚಿತ್ರ ಬಿಡುಗಡೆಯಾಗೋದು ಯಾವಾಗ..? ಈ ಚಿತ್ರದ ಟ್ರೇಲರ್ ನೋಡಿ ಥ್ರಿಲ್ ಆಗಿದ್ದವರನ್ನೆಲ್ಲ ಒತ್ತರಿಸಿಕೊಂಡು ಕಾಡಿದ್ದ ಪ್ರಶ್ನೆ ಇದೊಂದೇ. ಆಗಸ್ಟ್ ಹತ್ತರಂದು ಪಾದರಸ ರಿಲೀಸಾಗೋ ನಿರ್ಧಾರ ಹೊರ ಬೀಳುವ ಮೂಲಕ ಆ ಪ್ರಶ್ನೆಗೆ ಪರಿಹಾರ ಸಿಕ್ಕಿದೆ.

ಹೃಶಿಕೇಶ್ ಜಂಬಗಿ ನಿರ್ದೇಶನದ ಈ ಚಿತ್ರ ಇಂಥಾದ್ದೊಂದು ವ್ಯಾಪಕ ಕುತೂಹಲ ಕೆರಳಿಸಿದ್ದು ಟ್ರೇಲರ್ ಮೂಲಕ. ಬಹುಶಃ ಸಂಚಾರಿ ವಿಜಯ್ ತಮ್ಮ ನಟನೆಯ ಮೂಲಕವೇ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹಾಸ್ಯ ಪ್ರಧಾನ ಚಿತ್ರದಲ್ಲಿಯೂ ಘನ ಗಂಭೀರವಾದ ಪಾತ್ರವನ್ನೇ ಮಾಡಿದ್ದ ಸಂಚಾರಿ ವಿಜಯ್ ಏಕಾಏಕಿ ಪ್ಲೇಬಾಯ್ ಗೆಟಪ್ಪಿನಲ್ಲಿ ಕಾಣಿಸಿಕೊಂಡರೆ ಯಾರಿಗಾದರೂ ಶಾಕ್ ಆಗದಿರಲು ಸಾಧ್ಯವೇ?

ಈ ಕಾರಣದಿಂದಲೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೇಲರ್ ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ಸಂಚಲನ ಸೃಷ್ಟಿಸಿದೆ. ಇಡೀ ಚಿತ್ರದ ತುಂಬಾ ವಿಜಯ್ ಇದೇ ರೀತಿ ಪ್ಲೇ ಬಾಯ್ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಾರಾ? ಅವರ ಪಾತ್ರಕ್ಕೆ ಇನ್ನೂ ಒಂದಷ್ಟು ಶೇಡುಗಳಿವೆಯಾ ಅಂತೆಲ್ಲ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದರೆ, ಪೋಸ್ಟರುಗಳು ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗಿವೆ.

ಇದೇ ರೀತಿ ಸಂಚಾರಿ ವಿಜಯ್ ಗೆಳೆಯನಾಗಿ ನಟಿಸಿರೋ ನಿರಂಜನ್ ದೇಶಪಾಂಡೆ ಕೂಡಾ ತಮ್ಮೊಳಗಿನ ಅಸಲೀ ನಟನನ್ನು ಈ ಚಿತ್ರದಲ್ಲಿ ಹೊರ ಹಾಕಿದ್ದಾರಂತೆ. ಈವರೆಗೂ ರೇಡಿಯೋ ಜಾಕಿ, ನಿರೂಪಕ ಮುಂತಾದ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ನಿರಂಜನ್ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಕೂಡಾ ಪಾದರಸ ಅವರನ್ನು ನಟನಾಗಿ ನೆಲೆಯೂರಿಸುವ ಲಕ್ಷಣಗಳೂ ಇದ್ದಾವೆ.

ಒಟ್ಟಾರೆಯಾಗಿ ನಿರ್ದೇಶಕ ಹೃಶಿಕೇಶ್ ಜಂಬಗಿ ಸಂಚಾರಿ ವಿಜಯ್ ಅವರ ಗೆಟಪ್ಪನ್ನೇ ಬದಲಿಸಿದ್ದಾರೆ. ಒಂದೆಡೆ ಟ್ರೇಲರ್ ಹವಾ, ಮತ್ತೊಂದೆಡೆ ಹಾಡುಗಳ ಹಾವಳಿಯೊಂದಿಗೇ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಪಾದರಸ ಥಿಯೇಟರುಗಳಲ್ಲಿ ಹರಿದಾಡಲು ವಾರಗಳಷ್ಟೇ ಬಾಕಿ ಉಳಿದಿವೆ.

https://www.youtube.com/watch?v=q9_ZKAGpbOw

Comments

Leave a Reply

Your email address will not be published. Required fields are marked *