ಒಂದೇ ತಿಂಗಳಲ್ಲಿ ಲವ್, 2ನೇ ತಿಂಗಳಿಗೆ ಮದ್ವೆ, 3ನೇ ತಿಂಗಳಲ್ಲಿ ಹಣದ ಸಮೇತ ನಾಟ್ ರಿಚಬಲ್- ಇದು ಎಸ್ಕೇಪ್ ರಾಣಿ ಕಹಾನಿ

ಬೆಂಗಳೂರು: ಒಂದೇ ತಿಂಗಳಲ್ಲಿ ಲವ್, ಎರಡನೇ ತಿಂಗಳಲ್ಲಿ ಮದುವೆ, ಮೂರನೇ ತಿಂಗಳಲ್ಲಿ ಗಂಡನ ಹಣದ ಸಮೇತ ನಾಟ್ ರಿಚಬಲ್. ಇದು ಎಸ್ಕೇಪ್ ರಾಣಿಯ ಇನ್‍ಸೈಡ್ ಸ್ಟೋರಿ. ನಗರದ ಬಾಣಸವಾಡಿಯಲ್ಲಿ ಇಂತಹದೊಂದು ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿರುವ ಆಂಧ್ರ ಮೂಲದ ಇಲಿಯಾಜ್ ಅಹಮ್ಮದ್ ಮೋಸಕ್ಕೆ ಒಳಗಾದ ಯುವಕ. ಇಲಿಯಾಜ್ ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಂದು ಎಂಬ ಯುವತಿಯೊಂದಿಗೆ ಪರಿಚಯವಾಗಿತ್ತು. ಪರಿಚಯ ಒಂದೇ ತಿಂಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. ಎರಡನೇ ತಿಂಗಳಲ್ಲಿ ಇಬ್ಬರ ಮದುವೆಯೂ ನಡೆದಿದೆ. ಮೇ 30ರಂದು ಸ್ನೇಹಿತರೊಬ್ಬರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿದ ಪತ್ನಿ ಇದೂವರೆಗೂ ಹಿಂದಿರುಗಿ ಬಂದಿಲ್ಲ.

ಮನೆಯಿಂದ ಹೋಗುವಾಗ ಇಲಿಯಾಜ್ ನ 4 ಲಕ್ಷ ರೂ. ಹಣ ಮತ್ತು 50 ಗ್ರಾಂ ಚಿನ್ನದ ಒಡೆವೆ ಸಮೇತ ಹೋಗಿದ್ದಾಳೆ. ವಿಷಯ ತಿಳಿದ ಗಂಡ ಇಲಿಯಾಜ್ ಪತ್ನಿಗಾಗಿ ಸಿಕ್ಕ ಸಿಕ್ಕ ಕಡೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹುಡುಕಾಟದಲ್ಲಿ ತನ್ನ ಪತ್ನಿಯ ಬಗ್ಗೆ ಮತ್ತಷ್ಟು ಆಸಲಿ ಸತ್ಯಗಳು ಬೆಳಕಿಗೆ ಬಂದಿವೆ. ಪತ್ನಿ ಬಿಂದುಗೆ ಇಲಿಯಾಜ್ ಜೊತೆ ವಿವಾಹಕ್ಕೂ ಮುನ್ನವೇ ಮತ್ತೊಂದು ಮದುವೆ ಆಗಿತ್ತಂತೆ. ಇಷ್ಟು ಸಾಲದು ಎಂಬಂತೆ ಬಿಂದು ಈಗ ಮತ್ತೊಂದು ಯುವಕನ ಜೊತೆ ಮದುವೆ ತಯಾರಿ ನಡೆಸಿದ್ದಾಳೆ ಎಂಬ ಮಾಹಿತಿಗಳು ಸಹ ಇಲಿಯಾಜ್ ಸಿಕ್ಕಿದೆ. ಇಷ್ಟೆಲ್ಲಾ ಆದರೂ ನನಗೆ ನನ್ನ ಹೆಂಡತಿ ಬೇಕು ಅಂತಾ ಇಲಯಾಜ್ ಕಣ್ಣೀರು ಹಾಕುತ್ತಿದ್ದಾರೆ.

ಸದ್ಯ ಇಲಿಯಾಜ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುಡ್ಡು ಇರೋ ಯುವಕರಿಗೆ ಈ ರೀತಿ ಪಂಗನಾಮ ಹಾಕೋದೆ ಇವಳ ಕೆಲಸನಾ ಅನ್ನೋ ಅನುಮಾನ ಮೂಡಿದೆ.

Comments

Leave a Reply

Your email address will not be published. Required fields are marked *