ನೋಡುಗರ ಹೃದಯ ಕದ್ದ ಆಲಿಯಾ ಫೋಟೋ

ಮುಂಬೈ: ನಟಿ ಆಲಿಯಾ ಭಟ್ ಚಿಕ್ಕ ವಯಸ್ಸಿನಲ್ಲಿಯೇ ಬಾಲಿವುಡ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡವರಾಗಿದ್ದಾರೆ. ಇದೀಗ ಬಬ್ಲಿ ಗರ್ಲ್ ಅಂತಾ ಕರೆಸಿಕೊಳ್ಳುವ ಆಲಿಯಾರ ಬಾಲ್ಯದ ಫೋಟೋ ನೋಡುಗರ ಹೃದಯ ಕದಿಯುತ್ತಿದೆ. ಇನ್ ಸ್ಟಗ್ರಾಂನಲ್ಲಿ ಆಲಿಯಾ ಅವರು ಹಿರಿಯ ನಟ ಪರೇಶ್ ರಾವಲ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

1998ರಲ್ಲಿ ‘ತಮನ್ನಾ’ ಚಿತ್ರದ ಚಿತ್ರೀಕರಣ ವೇಳೆ ಈ ಫೋಟೋವನ್ನು ತೆಗೆಯಲಾಗಿದ್ದು, ಸಿನಿಮಾದಲ್ಲಿ ಪರೇಶ್ ರಾವಲ್ ಮತ್ತು ಪೂಜಾ ಭಟ್ ಲೀಡ್ ರೋಲ್ ಗಳಲ್ಲಿ ನಟಿಸಿದ್ದರು. ತಮನ್ನಾ ಸಿನಿಮಾ ಆಲಿಯಾ ತಂದೆ ಮಹೇಶ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿದ್ದರಿಂದ ತಂದೆಯೊಂದಿಗೆ ಶೂಟಿಂಗ್ ಸೆಟ್ ಗೆ ತೆರಳಿದಾಗ ಈ ಫೋಟೋ ಕ್ಲಿಕ್ಕಿಸಲಾಗಿತ್ತು. ಪುಟ್ಟ ಸ್ಟೂಲ್ ಮೇಲೆ ಕೂತಿರುವ ಮುದ್ದಾದ ಆಲಿಯಾ, ಗೊಂಬೆಯಂತೆ ಕಾಣುತ್ತಿದ್ದಾರೆ ಎಂದು ನೋಡಗರು ಕಾಮೆಂಟ್ ಮಾಡುತ್ತಿದ್ದಾರೆ.

https://www.instagram.com/p/BlaSmuxn6Eq/?taken-by=aliaabhatt

ಇದೇ ಫೋಟೋವನ್ನು ಪರೇಶ್ ರಾವಲ್ ಸಹ ಶೇರ್ ಮಾಡಿಕೊಂಡಿದ್ದು, ಪ್ರತಿಭಾನ್ವಿತ ನಟಿಯೊಂದಿಗೆ ಮೊದಲ ಸಹ ನಟ ನಾನು ಎಂದು ಬರೆದುಕೊಂಡು ಆಲಿಯಾ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸೋದರಿ ಪೂಜಾ ಭಟ್ ಇನ್ನೆರೆಡು ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

ರಾಝಿ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಆಲಿಯಾ ಭಟ್ ‘ಬ್ರಹ್ಮಸತ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಸತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ರಣ್‍ಬೀರ್ ಕಪೂರ್ ನಟಿಸುತ್ತಿದ್ದು, ಸಿನಿಮಾ 2019ರಲ್ಲಿ ತೆರೆಕಾಣಲಿದೆ.

https://www.instagram.com/p/BlaP4ToAC47/?taken-by=poojab1972

Comments

Leave a Reply

Your email address will not be published. Required fields are marked *