ರಾಹುಲ್ ಮಾತು ಕೇಳಿ ರಾಜ್ಯದಲ್ಲಿ ಸೆಸ್ ಇಳಿಸ್ತಾರಾ ಸಿಎಂ ಕುಮಾರಸ್ವಾಮಿ?

ಬೆಂಗಳೂರು: ಲೋಕಸಭೆಯಲ್ಲಿ `ಪೆಟ್ರೋಲ್ ದರ ಹೆಚ್ಚಿಸಿದ್ದೀರಿ’ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾತನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೇಳುತ್ತಾರಾ ಎನ್ನು ಪ್ರಶ್ನೆಯೊಂದು ಇದೀಗ ಹುಟ್ಟಿಕೊಂಡಿದೆ.

ಯಾಕಂದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ವಿಧಿಸಿ ಬೆಲೆ ಏರಿಕೆ ಮಾಡಿತ್ತು. ಆದ್ರೆ ಅದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅದನ್ನ ಮರೆತಂತಿದ್ದು, ನಿನ್ನೆ ಲೋಕಸಭೆಯಲ್ಲಿ ಭಾಷಣದ ವೇಳೆ ರಾಹುಲ್ ಅವರು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತಾಡಿದ್ದರು. ಕೇಂದ್ರ ಸರ್ಕಾರ ಕೇವಲ 15 ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಬೇರೆ ದೇಶಗಳಲ್ಲಿ ಪೆಟ್ರೋಲ್ ದರ ಇಳಿಮುಖವಾಗುತ್ತಿದೆ. ಆದ್ರೆ ಭಾರತದಲ್ಲಿ ಮಾತ್ರ ಭಾರತ ದರ ಏರಿಕೆಯಾಗುತ್ತಿದೆ. ಆದ್ರೆ ಮೋದಿ ತಮ್ಮ ಆಪ್ತ ಉದ್ಯಮಿಗಳ ಜೇಬು ತುಂಬಿಸಲು ಬೆಲೆ ಏರಿಕೆ ಮಾಡ್ತಿದ್ದಾರೆಂದು ನೇರ ಆರೋಪ ಮಾಡಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ದೊಡ್ಡ ಸುಳ್ಳುಗಾರ- ರಾಹುಲ್ ಆರೋಪಕ್ಕೆ ಸಿಡಿದೆದ್ದ ಬಿಜೆಪಿ-ರಾಹುಲ್ ಗಾಂಧಿ ಮಾತಿಗೆ ನಕ್ಕ ಚೌಕಿದಾರ

ನಮ್ಮ ರಾಜ್ಯದಲ್ಲಿ ಸೆಸ್ ಹೆಚ್ಚಳದಿಂದ ಪೆಟ್ರೋಲ್ 1.14 ರೂ., ಡೀಸೆಲ್ 1.12 ರೂ. ದುಬಾರಿಯಾಗಿದೆ. ಈ ಮೂಲಕ ಲೋಕಸಭೆಯಲ್ಲೊಂದು, ವಿಧಾನಸಭೆಯಲ್ಲೊಂದು ವಾದ ಮಾಡುವ ಮೂಲಕ ಎಡವಟ್ಟಿಗೆ ಸಿಲುಕಿದೆ. ಒಟ್ಟಿನಲ್ಲಿ ಸೆಸ್ ಇಳಿಸುವಂತೆ ರಾಹುಲ್ ಗಾಂಧಿಯವರು ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿಗೆ ಆಗ್ರಹಿಸ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.  ಇದನ್ನೂ ಓದಿ: ಲೋಕ ಸಮರ ಗೆಲ್ಲಲು ರಾಹುಲ್ ಹೊಸ ಫಾರ್ಮುಲಾ- ಮೋದಿನಾ ತಬ್ಬಿಕೊಂಡು ಕೊಟ್ರಾ ಪಂಥಾಹ್ವಾನ?

ಈ ಹಿಂದೆ ರಾಜ್ಯ ಬಜೆಟ್‍ನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರೀ ಟೀಕೆಗೆ ಗುರಿಯಾಗಿದ್ದರು. ಆ ಬೆನ್ನಲ್ಲೇ ಈಗ ತೈಲದ ಮೇಲಿನ ಸೆಸ್ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೈಕಲ್ ಏರಿ ಪ್ರತಿಭಟನೆ ಮಾಡಿದ್ದರು. ಆದರೆ ಬಜೆಟ್ ನಲ್ಲಿ ರಾಜ್ಯದ ದೋಸ್ತಿ ಸರ್ಕಾರವೇ ತೈಲ ದರ ಏರಿಕೆ ಮಾಡಿರುವುದು ಸಾಮಾಜಿಕ ಜಾಲತಾಣಿಗರ ಟೀಕೆಗೆ ಕಾರಣವಾಗಿತ್ತು.

Comments

Leave a Reply

Your email address will not be published. Required fields are marked *