ಬೆಂಗಳೂರಿನ ಪಿ.ಜಿ. ನಿವಾಸಿಗಳೇ ಹುಷಾರ್!

ಬೆಂಗಳೂರು: ಖತರ್ನಾಕ್ ಕಳ್ಳನೊಬ್ಬ ಹಾಡಹಗಲೇ ಪಿಜಿಗೆ ನುಗ್ಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಆದ ಘಟನೆ ಆರ್ ಆರ್ ನಗರದಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ಯಶುರಾಜು ಎಂಬಾತನೇ ಕಳ್ಳ ಎಂದು ಗುರುತಿಸಲಾಗಿದೆ. ಜುಲೈ 10ರಂದು ಕಳ್ಳತನ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉತ್ತರಹಳ್ಳಿ ಮುಖ್ಯರಸ್ತೆ ಚನ್ನಸಂದ್ರದಲ್ಲಿರುವ ಚೈತು ಪಿಜಿ ಯಲ್ಲಿ ಖತರ್ನಾಕ್ ಕಳ್ಳನೊಬ್ಬ ಹಾಡಗಲೇ ಪಿಜಿಗೆ ನುಗ್ಗಿ ಇಡೀ ರೂಂಗಳನ್ನು ಜಾಲಾಡುತ್ತಾನೆ. ನಂತರ ವಾಲ್ ರೋಬ್ ಲಾಕ್ ಹೊಡೆದು, ಕೈಗೆ ಸಿಗುವ ಬೆಲೆ ಬಾಳುವ ವಸ್ತುಗಳನ್ನು ಮತ್ತು ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ವಾಚ್ ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಸಂಪೂರ್ಣವಾಗಿ ಪಿಜಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈ ಘಟನೆ ಕುರಿತು ಆರ್ ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *