ಪುತ್ರಿ ನಿಶಾಳಿಂದಾಗಿ ಸಂಭ್ರಮದಲ್ಲಿ ತೇಲಾಡುತ್ತಿರುವ ಸನ್ನಿ ಲಿಯೋನ್!

ಮುಂಬೈ: ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಮೊಗದಲ್ಲಿ ಡಬಲ್ ಸಂಭ್ರಮ ನಗೆ ಮೂಡಿದೆ. ಇಂದು ಸನ್ನಿ ಲಿಯೋನ್ ಪತಿ ನಿಶಾಳನ್ನು ದತ್ತು ಪಡೆದು ಇಂದಿಗೆ ಒಂದು ವರ್ಷವಾಗಿದೆ. ಪುತ್ರಿ ನಿಶಾ ಮನೆಗೆ ಆಗಮಿಸಿದ ದಿನದಂದು ಸನ್ನಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿ, ಭಾವನಾತ್ಮಕವಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

“ನಿನ್ನನ್ನು ನಮ್ಮ ಮನೆಗೆ ಕರೆತಂದು ಒಂದು ವರ್ಷವಾಗಿದೆ. ನೀನು ನಮ್ಮ ಬದುಕನ್ನು ಬದಲಿಸಿದೆ. ಇಂದು ನಿನ್ನ 1ನೇ ವರ್ಷದ ವಾರ್ಷಿಕೋತ್ಸವಾಗಿದ್ದು, ನೀನು ಬಂದು ವರ್ಷ ಆಯ್ತು ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನಿನ್ನ ನನ್ನ ಪರಿಚಯ ಬಹಳ ವರ್ಷದ್ದು ಎನ್ನುವ ಭಾವನೆ ನನ್ನಲ್ಲಿ ಮೂಡಿದೆ. ನೀನು ನನ್ನ ಬದುಕಿನ ಮುಖ್ಯ ಭಾಗ ಮತ್ತು ಪ್ರಪಂಚದ ಅತೀ ಸುಂದರ ಹೆಣ್ಣು ಮಗು! ಐ ಲವ್ ಯು ವೆರಿ ಮಚ್ ನಿಶಾ ಕೌರ್ ವೆಬರ್..” ಎಂದು ಸನ್ನಿ ಲಿಯೋನ್ ತಮ್ಮ ಸಂತೋಷವನ್ನು ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಜುಲೈ 2017 ರಂದು ಮಹಾರಾಷ್ಟ್ರದ ಲಾತೂರ್‍ನಿಂದ ಸನ್ನಿ ಮತ್ತು ಡೇನಿಯಲ್ ಪುತ್ರಿ ನಿಶಾಳನ್ನು ದತ್ತು ಪಡೆದಿದ್ದರು. ಮೊದಲಿಗೆ ನಿಶಾಳ ಫೋಟೋ ನಮಗೆ ಸಿಕ್ಕಿದ ಕ್ಷಣ, ನಾನು ಬಹಳ ಖುಷಿಯಾಗಿದ್ದೆ. ಅಂದು ಭಾವುಕಳಾಗಿ ಬಹಳಷ್ಟು ಭಾವನೆಗಳನ್ನು ಒಟ್ಟಿಗೆ ಅನುಭವಿಸಿದೆ. ನಮ್ಮ ಬಳಿ ದತ್ತು ವಿಚಾರ ತೀರ್ಮಾನಿಸಲು ಅಕ್ಷರಶಃ ಮೂರು ವಾರಗಳ ಸಮಯವಿತ್ತು. ಸಾಮಾನ್ಯವಾಗಿ ಜನರಿಗೆ ಮಗುವಿಗೆ ಜನ್ಮ ಕೊಡಲು ಒಂಬತ್ತು ತಿಂಗಳು ಕಾಯಬೇಕು ಎಂದು ನಿಶಾ ಫೋಟೋ ಅಪ್ಲೋಡ್ ಮಾಡಿಕೊಂಡು ದತ್ತು ಪಡೆದ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು.

ಪುತ್ರಿ ಆಗಮಿಸಿದ ದಿನದಂದೇ ಸನ್ನಿ ಲಿಯೋನ್ ಜೀವನಾಧರಿತ `ಕರಣ್‍ಜಿತ್ ಕೌರ್’ ವೆಬ್ ಸಿರೀಸ್ ಆರಂಭವಾಗಲಿದೆ. ಟೀಸರ್ ಮತ್ತು ಟ್ರೇಲರ್ ನಿಂದಲೇ ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ ವೆಬ್ ಸೀರಿಸ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

https://www.instagram.com/p/BlR-ZMAHI65/?taken-by=sunnyleone

Comments

Leave a Reply

Your email address will not be published. Required fields are marked *