ಬೆಂಗಳೂರು: ಆಟೋ ಚಾಲಕರೊಬ್ಬರು ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಮಾಲೀಕರಿಗೆ ಹಿಂದಿರುಗಿಸಿ ಕೊಟ್ಟಿದ್ದು, ಆಟೋ ಚಾಲಕನನ್ನು ಡಿಸಿಪಿ ರವಿ ಡಿ. ಚನ್ನಣ್ಣನವರ್ ಪ್ರಶಂಸಿದ್ದಾರೆ.
ಶ್ರೀ.ಮೋಹನ್ ರೆಡ್ಡಿ ಅವರು ಬ್ಯಾಗ್ ಹಿಂದಿರುಗಿಸಿದ ಆಟೋ ಚಾಲಕ. ಇವರ ಆಟೋದಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ ಪ್ರಯಾಣಿಕರು ಇಳಿಯುವ ವೇಳೆ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಆಟೋದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು.
ಆಟೋ ಚಾಲಕ ಮೋಹನ್ ಇದನ್ನು ಗಮನಿಸಿ ಬಳಿಕ ಆ ಬ್ಯಾಗನ್ನು ಉಪ್ಪರಪೇಟೆ ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದಾರೆ. ನಂತರ ಪೊಲೀಸರು ಬ್ಯಾಗಿನ ವಾರಸುದಾರರ ಬಗ್ಗೆ ವಿಚಾರಣೆ ಮಾಡಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರು ಆಟೋ ಚಾಲಕ ಮೋಹನ್ ಕೈಯಿಂದಲೇ ಬ್ಯಾಗನ್ನು ಅದರ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಆಟೋ ಚಾಲಕ ಮೋಹನ ಅವರು ಪ್ರಮಾಣಿಕತೆಯನ್ನು ಮೆಚ್ಚಿ ಡಿಸಿಪಿ ರವಿ ಡಿ ಚನ್ನಣ್ಣನವರ್ ಅವರನ್ನು ಪ್ರಶಂಸಿಸಿದ್ದಾರೆ. ಈ ಬಗ್ಗೆ ಚನ್ನಣ್ಣನವರ್ ಆಟೋ ಚಾಲಕ, ಬ್ಯಾಗ್ ಹಿಂದಿರುಗಿಸಿದ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ಆಟೋ ಚಾಲಕ ಶ್ರೀ.ಮೋಹನ್ ರೆಡ್ಡಿರವರು ಪ್ರಯಾಣಿಕರು ಮರೆತು ಆಟೋರಿಕ್ಷಾದಲ್ಲೆ ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳಲ್ಲಿದ್ದ ಬ್ಯಾಗ್ ಅನ್ನು @Upparpetebcpಗೆ ಹಿಂದಿರುಗಿಸಿದ್ದು, ತದನಂತರ ವಾರಸುದಾರರಿಗೆ ನೀಡಲಾಗಿರುತ್ತದೆ. ಇವರ ಪ್ರಮಾಣಿಕತೆಯನ್ನು ಮೆಚ್ಚಿ ಪ್ರಶಂಸಿಸಲಾಯಿತು #Honest #AutoDriver #ShriMohanReddy @BlrCityPolice pic.twitter.com/eiIohtUw9y
— DCP West Bengaluru City (@DCPWestBCP) July 11, 2018

Leave a Reply