ಬಾಲಿವುಡ್ ನಟನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ – ಸರ್ಬಿಯಾಕ್ಕೆ ಹೋಗಿ ಸುದೀಪ್ ದಂಪತಿಯಿಂದ ವಿಶ್

ಬೆಂಗಳೂರು: ಇತ್ತೀಚೆಗೆ ಸುದೀಪ್ ದಂಪತಿ ಎಲ್ಲ ಕಾರ್ಯಕ್ರಮಗಳಲ್ಲೂ ಜೊತೆ ಜೊತೆಯಾಗಿ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಸುದೀಪ್ ತಮ್ಮ ಸಿನಿಮಾಗಳ ಬ್ಯುಸಿಯಲ್ಲಿಯೂ ಕುಟುಂಬದವರ ಜೊತೆ ಪ್ರವಾಸ ಮಾಡಿದ್ದಾರೆ.

ಜೂನ್ 25ರಂದು ಬಾಲಿವುಡ್ ನಟ, ಮಾಡೆಲ್ ಅಫ್ತಾಬ್ ಶಿವದಾಸನಿ ಅವರ ಹುಟ್ಟುಹಬ್ಬ ಇತ್ತು. ಅವರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಲು ಸುದೀಪ್ ದಂಪತಿ ಸರ್ಬಿಯಾ ದೇಶಕ್ಕೆ ಹೋಗಿದ್ದರು.

ಸರ್ಬಿಯಾ ದೇಶದ ಕ್ವೈಂಟ್ ನಗರವಾದ ಬಿಲ್ ಗ್ರೇಡ್‍ಗೆ ಪ್ರವಾಸ ಬೆಳೆಸಿದ್ದರು. ಸರ್ಬಿಯಾದಲ್ಲಿ ಹಲವು ಪ್ರವಾಸಿ ತಾಣಗಳಿಗೆ ಸುದೀಪ್ ದಂಪತಿ ಭೇಟಿ ನೀಡಿದ್ದಾರೆ. ಬಳಿಕ ಅಫ್ತಾಬ್ ಶಿವದಾಸನಿ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಬರ್ತ್ ಡೇ ಸರ್ಪ್ರೈಸ್ ಕೊಟ್ಟಿದ್ದಾರೆ. ಕೇಕ್ ತಂದು ಕಟ್ ಮಾಡಿಸಿ ಆಚರಣೆ ಮಾಡಿದ್ದಾರೆ.

ಈ ಎಲ್ಲ ಸವಿ ನೆನಪುಗಳ ಸುಂದರ ಫೋಟೋಗಳನ್ನು ಪ್ರಿಯಾ ಸುದೀಪ್ ಇಂದು ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸುದೀಪ್ ಜೊತೆ ಕಾಫಿ ಬ್ರೇಕ್ ಹಾಗೂ ರಿಲ್ಯಾಕ್ಸ್ ವಾಕ್ ಜೊತೆಗೆ ಅಫ್ತಾಬ್ ಹುಟ್ಟುಹಬ್ಬದ ಸರ್ಪ್ರೈಸ್  ಎಲ್ಲಾ ಕ್ಷಣವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ ನ್ನು ಸುದೀಪ್ ಗೆ ಮತ್ತು ಅಫ್ತಾಬ್ ಶಿವದಾಸನಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಅಫ್ತಾಬ್ ಶಿವದಾಸನಿ ಬಾಲ್ಯದಿಂದಲೂ ಸಿನಿಮಾರಂಗದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇಂದು ಒಬ್ಬ ಪರಿಪೂರ್ಣ ನಟರಾಗಿದ್ದು, ಜೊತೆಗೆ ಮಾಡೆಲ್ ಹಾಗು ನಿರ್ಮಾಪಕರೂ ಆಗಿದ್ದಾರೆ.

Comments

Leave a Reply

Your email address will not be published. Required fields are marked *