ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ ಗೆ ಎಚ್.ಡಿ.ಕುಮಾರಸ್ವಾಮಿ ದೂರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೂತನ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹೈಕಮಾಂಡ್ ನ ಎಐಸಿಸಿ ಮುಖಂಡರಿಬ್ಬರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಮಾತನಾಡುವ ರೀತಿ ಸರಿ ಇಲ್ಲ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಸಿದ್ದರಾಮಯ್ಯ ಅವರೇ ಕಾರಣ ಆಗಿದ್ದಾರೆ. ಪದೇ ಪದೇ ಈ ರೀತಿ ಆದರೆ ಆಡಳಿತ ನಡೆಸೋದು ಹೇಗೆ. ಕಾಂಗ್ರೆಸ್ ನಾಯಕರ ಇಂಥ ನಡೆಗೆ ನೀವೇ ಕಡಿವಾಣ ಹಾಕಬೇಕು ಎಂದು ದೂರಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಒಮ್ಮೆ ಅಪಸ್ವರ ಶುರುವಾದರೆ ದೊಡ್ಡ ಪ್ರಮಾಣಕ್ಕೆ ಹೋಗತ್ತದೆ. ಬಜೆಟ್ ಮಂಡನೆ ಬಗ್ಗೆ ಸಿದ್ದರಾಮಯ್ಯ ಅವರು ಮಾತಾಡಿದ್ದು, ಸರಿಯಲ್ಲ. ಸಮನ್ವಯ ಸಮಿತಿಯಲ್ಲಿ ಏನೇ ವಿಚಾರ ಇದ್ದರೂ ಚರ್ಚೆ ಮಾಡಲಿ. ಬಹಿರಂಗ ಹೇಳಿಕೆ ಕೊಟ್ಟು ಸರ್ಕಾರಕ್ಕೆ ಮುಜುಗರ ಉಂಟು ಮಾಡೋದು ಬಿಡಬೇಕು ಎಂದು ಎಐಸಿಸಿ ನಾಯಕರ ಜೊತೆ ಕುಮಾರಸ್ವಾಮಿ ಖಡಕ್ಕಾಗಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *