ಉನ್ನತ ಶಿಕ್ಷಣ ಖಾತೆ ಬೇಡ್ವೇ ಬೇಡ ಅಂತಿದ್ದ ಜಿಟಿಡಿ ದಿಢೀರ್ ಒಪ್ಪಿಕೊಂಡಿದ್ಯಾಕೆ?

ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬೇಡ ಬೇಡ ಅಂತಿದ್ದ ಜಿಟಿ ದೇವೇಗೌಡ ದಿಢೀರ್ ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಯೊಂದು ಇದೀಗ ಮೂಡಿಬಂದಿದೆ.

ಉನ್ನತ ಶಿಕ್ಷಣ ಸಚಿವರ ಸಲಹೆಗಾರರಾಗಿದ್ದ ಪ್ರೊ. ರಂಗಪ್ಪ ಅವರೇ ಜಿಟಿ ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವ ಸ್ಥಾನ ನಿರಾಕರಿಸಲು ಕಾರಣ ಎನ್ನಲಾಗಿದೆ. ಆದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊನೆ ಕ್ಷಣದಲ್ಲಿ ಸಲಹೆಗಾರರನ್ನಾಗಿ ನೇಮಿಸಲ್ಲ ಅಂತ ಭರವಸೆ ಕೊಟ್ಟ ಬಳಿಕ ತನಗೆ ಕೊಟ್ಟ ಖಾತೆಯನ್ನು ನಿಭಾಯಿಸುವುದಾಗಿ ಒಪ್ಪಿಕೊಂಡಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.

ಇತ್ತ ಜಿಡಿಟಿ ಕಟ್ಟಿ ಹಾಕುವುದು ಕಷ್ಟ ಅಂತ ಭಾವಿಸಿದ ಗೌಡರ ಕುಟುಂಬ ಅಬಕಾರಿ, ಸಹಕಾರಿ ಖಾತೆ ಕೊಡಲು ಒಪ್ಪಲಿಲ್ಲ. ಹೀಗಾಗಿ ಖಾತೆ ಬದಲಾವಣೆ ಸಾಧ್ಯವೇ ಇಲ್ಲ ಅಂತ ಗೌಡರು ಸಂದೇಶ ರವಾನಿಸಿದ್ದು, ಬೇಕಿದ್ದರೆ ಒಪ್ಪಿಕೊಳ್ಳಿ, ಇಲ್ಲ ಬಿಡಿ ಅಂತ ಸ್ಪಷ್ಟವಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಕೊನೆ ಕ್ಷಣದಲ್ಲಿ ಜಿ.ಟಿ. ದೇವೇಗೌಡ ಖಾತೆ ಒಪ್ಪಿಕೊಂಡಿದ್ದಾರೆ ಅಂತ ಇನ್ನೊಂದು ಮೂಲದಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

ಜಿಟಿಡಿ ಖಾತೆ ಒಪ್ಪಿಕೊಳ್ಳಲು ಕುಮಾರಸ್ವಾಮಿ ಕೂಡ ಪ್ರಮುಖ ಕಾರಣ ಎಂಬುದಾಗಿ ತಿಳಿದುಬಂದಿದ್ದು, ಮುಖ್ಯಮಂತ್ರಿಗಳು ಮುಂದೆ ಖಾತೆ ಬದಲಾಯಿಸುವುದಾಗಿ ಭರವಸೆ ನೀಡಿದ್ದಾರೆ. ಈಗ ಖಾತೆ ಬದಲಿಸಿದ್ದರೆ ಬೇರೆಯವರೂ ಒತ್ತಡ ಹೇರುತ್ತಾರೆ. ಉನ್ನತ ಶಿಕ್ಷಣ ಜೊತೆ ಮೈಸೂರು ಉಸ್ತುವಾರಿ ನೀಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಸಿಎಂ ಭರವಸೆ ಹಿನ್ನೆಲೆಯಲ್ಲಿ ಜಿಟಿಡಿ ಖಾತೆ ಒಪ್ಪಿಕೊಂಡಿರುವುದಾಗಿಯೂ ತಿಳಿದುಬಂದಿದೆ. ಇದನ್ನೂ ಓದಿ:  ಖಾತೆ ಹಂಚಿಕೆಯಾದ ಬೆನ್ನಲ್ಲೇ ಬದಲಾವಣೆ- ಜಿಟಿಡಿಗೆ ಅಬಕಾರಿ ಕೊಡಲು ಸಿಎಂ ಒಪ್ಪಿಗೆ

ಒಟ್ಟಿನಲ್ಲಿ ಸಚಿವ ಸ್ಥಾನ ಸಿಕ್ಕಿದ ಬೆನ್ನಿಂದಲೇ ಜಿಟಿಡಿ ಅವರು ನನಗೆ ಈ ಖಾತೆ ಬೇಡ ಅಂತ ಹೇಳುತ್ತಲೇ ಬಂದಿದ್ದರು. ಅಲ್ಲದೇ ಸಚಿವರ ಬೆಂಬಲಿಗರು ಕೂಡ ತೀವ್ರ ವಿರೋಧ ವ್ತಕ್ತಪಡಿಸಿದ್ದರು. ಆದ್ರೆ ಇತ್ತೀಚೆಗೆ ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಸಚಿವರು ದಿಢೀರ್ ಅಂತ ಕೊಟ್ಟ ಖಾತೆಯನ್ನು ನಿಭಾಯಿಸುವುದಾಗಿ ಒಪ್ಪಿಕೊಂಡಿದ್ದರು.

Comments

Leave a Reply

Your email address will not be published. Required fields are marked *