ಯುವಕನ ಪ್ರೇಮ ಪಾಶದಲ್ಲಿ ಸಿಲುಕಿದ ಆಂಟಿ-ಅತ್ತ ಗಂಡನೂ ಇಲ್ಲ, ಇತ್ತ ಪ್ರಿಯತಮನೂ ಇಲ್ಲ!

ಹಾವೇರಿ: ಮದುವೆ ಆಗಿದ್ದರೂ ಯುವಕನೊಬ್ಬನ ಪ್ರೇಮದ ಬಲೆಗೆ ಬಿದ್ದು, ಆತ ನಾನೇ ನಿನ್ನ ಗಂಡ ಆಗ್ತೀನಿ ಎಂದಿದ್ದಕ್ಕೆ ಕೈಹಿಡಿದ ಗಂಡನಿಗೆ ವಿಚ್ಛೇದನ ನೀಡಿದ್ರು. ಆದರೆ ಈಗ ನಾನೇ ನಿನ್ನ ಗಂಡ ಅಂದವನು ಕೈಕೊಟ್ಟು ಹೋಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಂಜುರ ಇಲಾಹಿ ಮುಲ್ಲಾ ಮೋಸ ಮಾಡಿ ಯುವಕ. ಸಂತ್ರಸ್ತೆ ಜೊತೆಗಿದ್ದ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದು, ನೊಂದ ಸಂತ್ರಸ್ತೆ ನನಗೆ ನ್ಯಾಯ ಕೊಡಿಸಿ ಎಂದು ಹಾನಗಲ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಘಟನೆಯ ವಿವರ:
ಸಂತ್ರಸ್ತೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದವರು. ಮೂರು ವರ್ಷಗಳ ಹಿಂದೆ ಗದಗ ಮೂಲದ ಯುವಕನೊಂದಿಗೆ ಮದುವೆಯಾಗಿತ್ತು. ಮದುವೆ ನಂತರ ಅಕ್ಕಿ ಆಲೂರಿಗೆ ಅಗಮಿಸಿದರು. ಒಂದು ದಿನ ಸಂತ್ರಸ್ತೆಯ ಮೊಬೈಲ್ ಕೆಟ್ಟು ಹೋಗಿತ್ತು. ಆಗ ಅದೇ ಗ್ರಾಮದ ಮಂಜುರ ಇಲಾಹಿ ಮುಲ್ಲಾ ಅಂಗಡಿಯಲ್ಲಿ ಮೊಬೈಲ್ ರಿಪೇರಿಗೆ ಕೊಟ್ಟಿದ್ದರು.

ಮೊಬೈಲ್ ರಿಪೇರಿ ಮಾಡಿಕೊಟ್ಟಿದ್ದ ಮಂಜುರ ಇಲಾಹಿ ಆಕೆಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯ ಅಂತ ಹೇಳಿ ಊರೂರು ಸುತ್ತಾಡಿಸಿದ. ಅಷ್ಟೇ ಅಲ್ಲದೇ ಆಕೆಯೊಂದಿಗೆ ನಾಲೈದು ಬಾರಿ ದೈಹಿಕ ಸಂಪರ್ಕ ಹೊಂದಿದ್ದು, ಈಗ ಮದುವೆ ಆಗು ಅಂದರೆ ಕೈಕೊಟ್ಟು ಹೋಗಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಅಂತ ಮೋಸ ಹೋದ ಸಂತ್ರಸ್ತೆ ಹೇಳುತ್ತಿದ್ದಾರೆ.

ಮೊಬೈಲ್ ರಿಪೇರಿ ನೆಪದಲ್ಲಿ ಪರಿಚಿತನಾದ ಯುವಕನಿಗಾಗಿ ಸಂತ್ರಸ್ತೆ ಕೈಹಿಡಿದ ಗಂಡನಿಗೆ ವಿಚ್ಛೇದನ ನೀಡಿದ್ದರು. ಆದರೆ ಮದುವೆ ಆಗ್ತೀನಿ ಅಂದವನು ಈಕೆಯಿಂದ ಎಲ್ಲವನ್ನೂ ಅನುಭವಿಸಿ ಕೈಕೊಟ್ಟು ಹೋಗಿದ್ದಾನೆ. ಸಾಲದ್ದಕ್ಕೆ ಈಕೆಯೊಂದಿಗಿನ ವಿಡಿಯೋ ಇಟ್ಟೊಂಡು ಸಮ್ಮನಿರು ಇಲ್ಲದಿದ್ದರೆ ವಿಡಿಯೋ ಲೀಕ್ ಮಾಡುತ್ತೇನೆ ಅಂತಾ ಬ್ಲಾಕ್‍ಮೇಲ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾನೆ.

ಇದರಿಂದ ಕಂಗಾಲಾಗಿರುವ ಸಂತ್ರಸ್ತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿಯನ್ನ ಪೊಲೀಸರು ಬಂಧಿಸಲೇ ಇಲ್ಲ. ಈಗಲಾದರೂ ಆತನನ್ನ ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *