ಮೋದಿಯವರು ನನಗೆ ಶ್ರೀರಾಮ ಇದ್ದಂತೆ: ಪತ್ನಿ ಜಶೋದಾ ಬೆನ್

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು ಎಂದು ಮಧ್ಯಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಆನಂದಿಬೆನ್ ಈ ರೀತಿ ಹೇಳಿಕೆಯನ್ನು ನೀಡಿರುವುದು ನನಗೆ ಅಶ್ಚರ್ಯವನ್ನು ಉಂಟುಮಾಡಿದೆ. 2014 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸ್ವತಃ ನರೇಂದ್ರ ಮೋದಿಯವರು, ತಾವು ವಿವಾಹಿತರು ಎಂದು ನನ್ನ ಹೆಸರು ನಮೂದಿಸಿದ್ದಾರೆ ಎಂದು ಹೇಳಿದ್ದನ್ನು ಜಶೋದಾ ಬೆನ್ ಸಹೋದರ ಅಶೋಕ್ ಮೋದಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿರುವುದು ಸುದ್ದಿಯಾಗಿತ್ತು.

ಈ ವಿಚಾರ ಸಂಬಂಧಪಟ್ಟಂತೆ ವಿದ್ಯಾವಂತ ಮಹಿಳೆಯಾಗಿ ಆನಂದಿಬೆನ್ ಈ ರೀತಿ ಹೇಳಿಕೆ ನೀಡುವುದು ಸರಿಯಿಲ್ಲ. ನಾನು ಒಬ್ಬ ಶಿಕ್ಷಕಿಯಾಗಿ ಇದು ಸರಿ ಕಾಣುವುದಿಲ್ಲ. ಅವರು ಪ್ರಧಾನಿಯಾಗಿದ್ದು, ಈ ರೀತಿಯ ಹೇಳಿಕೆಗಳು ಅವರ ಗೌರವ ಪ್ರತಿಷ್ಠೆಗೆ ಧಕ್ಕೆ ತರುವಂತದ್ದಾಗಿದೆ. ಅವರು ನನಗೆ ಶ್ರೀರಾಮ ಇದ್ದಂತೆ ಎಂದು ಹೇಳಿದ್ದಾರೆ.

ಉತ್ತರ ಗುಜರಾತ್‍ನ ಉಂಝಾದಲ್ಲಿ ಅವರ ಸಹೋದರ ಅಶೋಕ್ ಮೋದಿ ಆ ವಿಡಿಯೋದಲ್ಲಿ ಮಾತನಾಡಿದ್ದು, ಜಶೋದಾ ಬೆನ್ ಎಂದು ಐಎಎನ್‍ಎಸ್‍ಗೆ ಖಚಿತಪಡಿಸಿದ್ದಾರೆ.

ಈ ಆನಂದಿಬೆನ್ ಹೇಳಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಾಗ ನಂಬಿರಲಿಲ್ಲ. ಆದರೆ ಇದು ಜೂನ್ 19 ರಂದು ದಿವ್ಯ ಭಾಸ್ಕರ ಪತ್ರಿಕೆಯಲ್ಲಿ ಮೊದಲ ಪುಟದಲ್ಲಿ ಮುದ್ರಣಗೊಂಡಿತ್ತು. ಈಗಿರುವಾಗ ಅದು ತಪ್ಪಾಗಿರಲು ಸಾಧ್ಯವಿಲ್ಲ ಎಂದರು. ಜಶೋದಾಬೆನ್ ರವರ ಲಿಖಿತ ಹೇಳಿಕೆಯನ್ನು ಕೂಡ ನಾವು ದಾಖಲಿಸಿಕೊಂಡಿದ್ದೇವೆಂದು ಹೇಳಿದರು.

Comments

Leave a Reply

Your email address will not be published. Required fields are marked *