ದೆಹಲಿಯಲ್ಲಿ ಡಬಲ್ ಬೆಡ್‍ರೂಂ ಫ್ಲ್ಯಾಟ್ ಇರೋದು ನಿಜ- ಡಿಕೆಶಿ

ಬೆಂಗಳೂರು: ನನಗೆ ಐಟಿಯಿಂದ ಯಾವ ನೋಟಿಸು ಬಂದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಲ್ಲಿ ಯಾರ ದುಡ್ಡು ಸಿಕ್ಕಿದ್ಯೋ ನನಗೆ ಗೊತ್ತಿಲ್ಲ ಅಂತ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಹೆಲಿಯಲ್ಲಿ ನನ್ನದು ಡಬಲ್ ಬೆಡ್ ರೂಂ ನ ಒಂದು ಸಣ್ಣ ಫ್ಲ್ಯಾಟ್ ಇದೆ. ಈಗ ಇನ್ನೊಂದು ಫ್ಲಾಟ್ ತಗೆದುಕೊಂಡಿದ್ದೇನೆ. ಅದು ರಿನೋವೇಶನ್ ಆಗ್ತಿದೆ. ಅದು ಬಿಟ್ರೆ ಬೇರೆ ಫ್ಲಾಟ್ ದುಡ್ಡು ಯಾವ್ದು ನನಗೆ ಗೊತ್ತಿಲ್ಲ ಅಂತ ಅವರು ಸ್ಪಷ್ಟಪಡಿಸಿದ್ರು.

ನೀವುಗಳೇ ಜೈಲು, ಕಂಬಿ ಎಲ್ಲಾ ಚಿತ್ರ ಹಾಕಿ ತೋರಿಸುತ್ತಿದ್ದೀರಾ? ನೀವು ಅದರಿಂದ ಖುಷಿ ಆಗಿದ್ದೀರಲ್ಲ ಖುಷಿಯಾಗಿರಿ. ಜನರನ್ನ ಖುಷಿ ಪಡಿಸುವ ಕೆಲಸ ನಿಮ್ಮದು ಅದನ್ನು ನೀವು ಮಾಡಿ ಅಂದ್ರು.


ಕಂಪ್ಲೆಂಟ್ ಕಾಪಿ ಸಿಕ್ಕಿಲ್ಲಾ. ನನಗೆ ಇದುವರೆಗೆ ಕೋರ್ಟ್ ಸಮನ್ಸ್ ನೀಡಿಲ್ಲ. ನನಗೆ ಈ ವಿಚಾರದ ಕುರಿತು ಏನು ತಿಳಿದಿಲ್ಲ. ಒಮ್ಮೆ ಕಂಪ್ಲೆಂಟ್ ಕಾಪಿ ಮತ್ತು ಸಮನ್ಸ್ ದೊರೆತ ನಂತ್ರ ನನ್ನ ವಕೀಲರು ನೋಡ್ತಾರೆ. ನಂತ್ರ ಅದರ ಬಗ್ಗೆ ಮಾತನಾಡುತ್ತೆನೆ. ಈಗ ಸೂಕ್ತ ಸಮಯವಲ್ಲ. ಎಲ್ಲದಕ್ಕೂ ಉತ್ತರ ಸಿಗತ್ತೆ ಆ ಶುಭ ಗಳಿಗೆಗಾಗಿ ಕಾಯಬೇಕು ಅಂದ್ರು. ಇದನ್ನೂ ಓದಿ:  ಐಟಿ ದಾಳಿಗೆ ಒಳಗಾಗಿರೋ ಡಿಕೆಶಿಗೆ ಹೊಸ ಸಂಕಷ್ಟ!

ಕರಂದ್ಲಾಜೆಗೆ ತಿರುಗೇಟು:
ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಯಾರ ಬಗ್ಗೆನು ಮಾತನಾಡುವುದಿಲ್ಲ. ಎಲ್ಲದಕ್ಕು ಸಮಯ ಬರುತ್ತೆ ಅವಾಗ ಉತ್ತರ ನೀಡ್ತೇನೆ. ಕಾನೂನು ಇದೆ ತನಿಖೆ ನಡೆಯಲಿ ಅಂತ ತಿರುಗೇಟು ನಿಡಿದ್ರು.

ಯಾರ ಯಾರ ವ್ಯವಹಾರ ಎಲ್ಲಿ ಏನು? ಯಾವ ಉದ್ಯಮಿ ಬಳಿ ಎನ್ನೊದು ಎಲ್ಲಾ ನನಗೆ ಗೊತ್ತಿದೆ? ಯಾವ ಉದ್ಯಮಿ? ಯಾವ ಹೋಟೆಲ್ ಮಾಲೀಕ ಎಲ್ಲಾ ಗೊತ್ತಿದೆ. ಎಲ್ಲವನ್ನು ಹೇಳುತ್ತೇನೆ ಅದಕ್ಕೂ ಶುಭಗಳಿಗೆ ಶುಭ ಮುಹೂರ್ತ ಬರಲಿ ಅಂದ್ರು.

https://www.youtube.com/watch?v=_RZ6Q8bo-44

Comments

Leave a Reply

Your email address will not be published. Required fields are marked *