ಬಿಸಿಯೂಟ, ಶರತ್ ಮಡಿವಾಳ ಹತ್ಯೆ ಕುರಿತ ಆರೋಪಕ್ಕೆ ರಮಾನಾಥ ರೈ ಬೇಸರ

ಮಂಗಳೂರು: ಸರಕಾರಿ ಶಾಲೆಗಳಿಗೆ ಮಾತ್ರ ಬಿಸಿಯೂಟ ನೀಡುವುದು ನಿಯಮ ಎನ್ನುವ ಕಾರಣಕ್ಕೆ ಮಧ್ಯಾಹ್ನದ ಊಟವನ್ನು ನಿಲ್ಲಿಸಲಾಗಿತ್ತು. ಆದರೆ ಶಾಲೆಯ ಮಕ್ಕಳ ಅನ್ನ ಕಸಿದುಕೊಂಡ್ರು ಅಂತ ನನ್ನ ಮೇಲೆ ಗೂಬೆ ಕೂರಿಸಿದ್ರು ಅಂತ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶಾಲೆಗೆ ಮಧ್ಯಾಹ್ನದ ಬಿಸಿಯೂಟ, ಕೊಲ್ಲೂರು ಮೂಕಾಂಬಿಕೆ ದೇವಾಸ್ಥಾನದಿಂದ ಬರುತ್ತಿತ್ತು. ಆದ್ರೆ ಸರ್ಕಾರದ ನಿಯಮದಂತೆ ಅದನ್ನು ನಿಲ್ಲಿಸಲಾಗಿತ್ತು. ಆದ್ರೆ ಬಳಿಕ ನನ್ನ ಮೇಲೆಯೇ ಆರೋಪ ಮಾಡಲಾಗಿತ್ತು ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು.

ಶಿಕ್ಷಣ ಇಲಾಖೆಯಿಂದ ಬಿಸಿಯೂಟ ನೀಡುವ ವ್ಯವಸ್ಥೆ ಇದೆ. ಅದರೆ ಅಂದು ಬಿಸಿಯೂಟ ಕೊಡ್ತೀವಿ ಅಂದ್ರು ಬೇಡ ಎಂದಿದ್ದರು. ಹೀಗಿರುವಾಗ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದರು. ಆದರೆ ಈಗ ಅವರೇ ಬಿಸಿಯೂಟ ಕೇಳಿದ್ದಾರೆ. ಇಲಾಖೆ ಕೊಡ್ತಾ ಇದೆ. ಇದರ ಬಗ್ಗೆ ಈಗ್ಯಾಕೆ ಯಾರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಇನ್ನು ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ವಿಚಾರದಲ್ಲಿ ಕೂಡ ಬಿಜೆಪಿಯವರು ಅಪಪ್ರಾಚಾರ ಮಾಡಿದರು. ಅದಕ್ಕಾಗಿ ಕಾನತ್ತೂರಿಗೆ ಹೋಗಿ ಬೇಡಿಕೊಂಡರೂ ತಮಾಷೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *