ಮಗಳು ನನ್ನನ್ನು ಪರಿಪೂರ್ಣ ವ್ಯಕ್ತಿಯಾಗಿ ಬದಲಿಸಿದಳು: ಧೋನಿ

ಮುಂಬೈ: ಮಗಳು ಜೀವಾ ನನ್ನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಬದಲಿಸಿದ್ದು, ಪ್ರತಿ ಮಗಳು ತಮ್ಮ ತಂದೆಗೆ ಹೆಚ್ಚು ಹತ್ತಿರವಾಗುತ್ತಾಳೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

ಐಪಿಎಲ್ ಟೂರ್ನಿಯ ಬಳಿಕ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿರುವ ಧೋನಿ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಮಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಜೀವಾ ಜನಿಸಿದ ಸಮಯದಲ್ಲಿ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹೆಚ್ಚು ಬ್ಯುಸಿ ಇದ್ದ ಕಾರಣ ಮಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಜೀವಾ ತನಗೆ ತುಂಬಾ ಹತ್ತಿರವಾಗಿದ್ದು, ಮಗಳ ತುಂಟಾಟ ನೋಡುವುದು ಮನಸ್ಸಿಗೆ ಹೆಚ್ಚು ಮುದ ನೀಡುತ್ತದೆ ಎಂದು ಹೇಳಿದ್ದಾರೆ.

ಜೀವಾ ನನ್ನನ್ನು ಒಬ್ಬ ಕ್ರಿಕೆಟ್ ಆಟಗಾರನಾಗಿ ಬದಲಿಸಿದ್ದಾಳಾ ಅಥವಾ ಪರಿಪೂರ್ಣ ವ್ಯಕ್ತಿಯಾಗಿ ಮಾಡಿದ್ದಾಳಾ ಎಂಬುವುದಕ್ಕಿಂತ ಆಕೆಯ ತುಂಟಾಟ ನನಗೆ ಇಷ್ಟವಾಗುತ್ತದೆ. ಊಟ ಮಾಡದೇ ಹಠ ಹಿಡಿದಾಗ ಆಕೆ ತಂದೆ ಬಂದು ಊಟ ಮಾಡಿಸುತ್ತಾರೆ, ಊಟ ಮಾಡು ಎಂಬ ಮಾತನ್ನು ಕೇಳುತ್ತಿದ್ದಳು. ಇವು ಹೆಚ್ಚು ಸಂತಸ ನೀಡುತ್ತದೆ ಎಂದು ಹೇಳಿದ್ದಾರೆ.

ಈ ಬಾರಿಯ ಐಪಿಎಲ್ ವೇಳೆಯೂ ಜೀವಾ ತನ್ನೊಂದಿಗೆ ಇದ್ದಳು, ಹಲವು ಬಾರಿ ಪಂದ್ಯ ಮುಗಿದ ಬಳಿಕ ಆಕೆ ಮೈದಾನದಲ್ಲೇ ಇತರೇ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಆಕೆ ಎಷ್ಟು ಕ್ರಿಕೆಟ್ ಅನ್ನು ಅರ್ಥೈಸಿಕೊಂಡಿದ್ದಾಳೆ ಎನ್ನುವುದು ಗೊತ್ತಿಲ್ಲ. ಆದರೆ ತಾನು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಳು ಎಂದು ತಿಳಿಸಿದ್ದಾರೆ.

ಮಗಳೊಂದಿಗೆ ಸಮಯ ಕಳೆಯುತ್ತಿರುವ ಹಲವು ಸ್ಮರಣೀಯ ಘಟನೆಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಧೋನಿ, ತಂದೆ ಮಗಳ ನಡುವಿನ ತುಂಟಾಟದ ಕ್ಷಣಗಳ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದಾರೆ.

https://www.instagram.com/p/BjDCPRqHu-p/?hl=en&taken-by=mahi7781

https://www.instagram.com/p/BiB3dqknOPG/?hl=en&taken-by=mahi7781

https://www.instagram.com/p/BQf1PE9h9Jj/?hl=en&taken-by=mahi7781

Comments

Leave a Reply

Your email address will not be published. Required fields are marked *