251 ರೂ. ಮೊಬೈಲ್ ನೀಡುತ್ತೇನೆ ಎಂದಿದ್ದ ಕಂಪೆನಿ ಮಾಲೀಕ ಅರೆಸ್ಟ್

ನವದೆಹಲಿ: ಫ್ರೀಡಂ 251 ಸ್ಮಾರ್ಟ್ ಫೋನ್ ಅನ್ನು ಕೇವಲ 251 ರೂ.ಗೆ ನೀಡುತ್ತೇನೆ ಅಂತ ಹೇಳಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿ ಮಾಲೀಕ ಮೋಹಿತ್ ಗೋಯಲ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಹಣ ನೀಡಿದ ಆರೋಪಕ್ಕೆ ಸಂಬಂಧಿüಸಿದಂತೆ ಭಾನುವಾರ ಗೋಯಲ್ ಸೇರಿ ಇತರರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಕಳೆದ ಮಾರ್ಚ್ 6ರಂದು ಮಹಿಳೆಯೊಬ್ಬರು ತನ್ನ ಮೇಲೆ ಐವರು ಉದ್ಯಮಿಗಳು ಸಾಮೂಹಿಕವಾಗಿ ಅತ್ಯಾಚಾರವೆಗಿದ್ದಾರೆ ಅಂತ ರಾಜಸ್ಥಾನದ ಅಲ್ವರ್ ಜಿಲ್ಲೆಯ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು.

ದೂರಿನಲ್ಲಿ, ತಾನು ನಗರದ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಈ ವೇಳೆ ತನ್ನ ಮೇಲೆ ಐವರು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಅಂತ ಆರೋಪಿಸಿದ್ದರು. ಸದ್ಯ ಮಹಿಳೆಯ ದೂರಿನಂತೆ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೋಯಲ್ ಹೊರತುಪಡಿಸಿ ಉಳಿದ ಬಂಧಿತರ ಹೆಸರನ್ನು ಮಹಿಳೆ ಪ್ರಸ್ತಾಪಿಸಿಲ್ಲ. ಸದ್ಯ ನೇತಾಜಿ ಸುಭಾಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಗೆ 5 ಕೋಟಿ ರೂ. ಪಡೆದುಕೊಂಡು ಸುಮ್ಮನಾಗುವಂತೆ ಉದ್ಯಮಿಗಳು ಹೇಳಿದ್ದರು. ಈ ಸಂಬಂಧ ಹಣ ಪಡೆಯಲು ಬರುತ್ತೇನೆ ಅಂತಾ ಮಹಿಳೆ ತಿಳಿಸಿದ್ದರು. ಭಾನುವಾರ ಉದ್ಯಮಿಯ ಕಚೇರಿಗೆ ಮಹಿಳೆ ಆಗಮಿಸಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *