ಮೈಸೂರು: ಪ್ಯಾರ್ ಗೇ ಆಗ್ಬಿಟೈತೆ ಅನ್ನುತ್ತಲೇ ಪಡ್ಡೆಗಳ ಹೃದಯ ಬಡಿತ ಹೆಚ್ಚಿಸಿದ್ದ ನಟಿ ಪರೋಲ್ ಯಾದವ್ ಇಂದು ತಮ್ಮ 29ನೇ ವರ್ಷದ ಹುಟ್ಟಹಬ್ಬದ ಆಚರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಪರೋಲ್ ಯಾದವ್ ಈ ವರ್ಷದ ಬರ್ತಡೆಯನ್ನು ವಿಶೇಷವಾಗಿ ಬಹುಭಾಷಾ ನಟಿಯರಾದ ತಮನ್ನಾ, ಕಾಜಲ್ ಅಗರ್ ವಾಲ್ ಅವರೊಂದಿಗೆ ಆಚರಿಸಿದರು. ಮೂವರು ಬ್ಯೂಟಿಗಳ ಸಮಾಗಮಕ್ಕೆ ವೇದಿಕೆಯಾಗಿದ್ದು `ಬಟರ್ ಫ್ಲೈ’ ಸಿನಿಮಾ.

ಹೌದು ಕಂಗನಾ ರನೌತ್ ಅಭಿಯನದ ಬಾಲಿವುಡ್ ಚಿತ್ರ ಕ್ವೀನ್ ಈಗ ನಾಲ್ಕು ಭಾಷೆಯಲ್ಲಿ ಏಕಕಾಲಕ್ಕೆ ಸಿದ್ಧವಾಗುತ್ತಿದೆ. `ಬಟರ್ ಫ್ಲೈ’ ಕನ್ನಡದ ಅವತರಣಿಯಾಗಿದ್ದು, ಪರೋಲ್ ಯಾದವ್ ಅಭಿನಯಿಸಿದ್ದಾರೆ. ಚಿತ್ರೀಕರಣದ ನಡುವೆ ಪರೋಲ್ ಯಾದವ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ನಟ ರಮೇಶ್ ಅರವಿಂದ್ ನಿರ್ದೇಶನದ ಬಟರ್ ಫ್ಲೈ ಚಿತ್ರದ ಶೂಟಿಂಗ್ ಗಾಗಿ ಪರೋಲ್ ಯಾದವ್ ಕಳೆದ 15 ದಿನಗಳಿಂದಲೂ ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಇದೇ ಚಿತ್ರ ತಮಿಳಿನಲ್ಲಿ ಪ್ಯಾರೀಸ್, ತೆಲುಗಿನಲ್ಲಿ ಕ್ವೀನ್ಸ್ ಒನ್ಸ್ ಎಗೇನ್, ಮಲೆಯಾಳಂನಲ್ಲಿ ಜಾಮ್ ಜಾಮ್ ಹೆಸರಿನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿದೆ. ನಾಲ್ಕೂ ಭಾಷೆಗಳಲ್ಲಿ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿವೆ. ಈ ಪೈಕಿ ತಮಿಳು, ತೆಲುಗು ಚಿತ್ರಗಳ ಒಂದಷ್ಟು ಸೀಕ್ವೆನ್ಸ್ ಮೈಸೂರಿನಲ್ಲಿ ಶೂಟ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಜಲ್, ತಮನ್ನಾ ಮೈಸೂರಿಗೆ ಆಗಮಿಸಿದ್ದರು.
ಚಿತ್ರೀಕರಣದ ಪ್ರಚಾರದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಪಾತ್ರಗಳ ಬಗ್ಗೆ ಖುಷಿ ಹಂಚಿಕೊಂಡರು. ಪರೋಲ್ ಯಾದವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೂವರು ನಟಿಯರೂ ಮೈಸೂರಿನಲ್ಲಿ ಸಂಧಿಸಿದ್ರು.


Leave a Reply