ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನ್ಯ ಪ್ರಾಣಿಗಳನ್ನು ನೋಡಲೆಂದು ಉದ್ಯಾನವನಕ್ಕೆ ಭೇಟಿಕೊಟ್ಟಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಹುಲಿಗಳ ಕಾದಾಟವನ್ನು ಸೆರೆ ಹಿಡಿದ್ದಾರೆ.
ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡಿ ಅಲ್ಲಿನ ಪ್ರಾಣಿಗಳನ್ನು ಕಣ್ತುಂಬಿಕೊಳುತ್ತಾರೆ. ಅದೇ ರೀತಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬಿಳಿ ಹುಲಿಗಳು ಕಾದಾಟದ ರೋಚಕ ಕ್ಷಣಗಳು ನೋಡಿವಂತಹ ಅವಕಾಶ ಸಿಕ್ಕಿದೆ.

ಬಿಳಿ ಹುಲಿಗಳ ಕೇಜ್ ಬಳಿ ತೆರಳಿದ್ದ ಪ್ರವಾಸಿಗರಿಗೆ ಎರಡು ಹುಲಿಗಳ ಬಿಗ್ ಫೈಟ್ ನೋಡೋ ಭಾಗ್ಯ ಸಿಕ್ಕಿದ್ದು, ಈ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಹುಲಿಗಳ ಕಾದಾಟ ಮುಂದುವರೆದಿದ್ದು, ನೋಡುಗರಿಗೆ ಭಯ ಹುಟ್ಟಿಸುವಂತೆ ಕಾದಾಟ ನಡೆಸಿವೆ.
ಕಳೆದ ವರ್ಷವು ಉದ್ಯಾನವಲ್ಲಿದ್ದ ಬೆಂಗಾಲ್ ಟೈಗರ್ ಹಾಗೂ ಬಿಳಿ ಹುಲಿಯ ನಡುವೆ ಇಂತಹದ್ದೇ ಕಾದಾಟ ನಡೆದಿತ್ತು. ಆದರೆ ಅಂದು ಕಾದಾಟದಲ್ಲಿ ಒಂದು ಹುಲಿ ಸಾವನ್ನಪ್ಪಿತ್ತು. ಘಟನೆಯ ಸಂಬಂಧ ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷದ ಆರೋಪ ಕೇಳಿ ಬಂದಿತ್ತು. ಆದರೆ ಈ ಬಾರಿ ಇಂತಹ ಯಾವುದೇ ಘಟನೆ ನಡೆದಿಲ್ಲ.

https://www.youtube.com/watch?v=epjgrOijZ8c

Leave a Reply