ಸಾಲ ಮನ್ನಾ ಮಾಡುತ್ತೇವೆ ಅಂತಾ ಹೇಳಲಿ ಬಂದ್ ಹಿಂಪಡೆಯುತ್ತೇವೆ: ಕೆ.ಎಸ್.ಈಶ್ವರಪ್ಪ

ದಾವಣಗೆರೆ: ಇನ್ನೆರಡು ದಿನಗಳಲ್ಲಿ ಸಾಲ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಬಂದ್ ಹಿಂಪಡೆಯುತ್ತೇವೆ ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ರು. ಮಾಡದಿದ್ದಲ್ಲಿ ರೈತರ ಪರವಾಗಿ ನಾವು ನಿಲ್ಲುತ್ತೇವೆ. ಯಡಿಯೂರಪ್ಪ ನವರು ಸಿದ್ದರಾಮಯ್ಯ ನವರ ಬಗ್ಗೆ ಸಾಫ್ಟ್ ಕಾರ್ನ್‍ರ್ ತೋರಿಲ್ಲ. ಜನತಾದಳದಲ್ಲಿ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಾನವೀಯತೆ ದೃಷ್ಟಿಯಿಂದ ಹೇಳಿದ್ದಾರೆ. ನಾವು ಅಧಿವೇಶನದಿಂದ ಪಲಾಯನ ಮಾಡಿಲ್ಲ. ಅವರು ಪಲಾಯನ ಮಾಡಿದ್ದಾರೆ ಎಂದರೆ ನಾವೇನು ಮಾಡೋಕೆ ಸಾಧ್ಯವಿಲ್ಲ. ನಾವು ಸದನದಿಂದ ಹೊರ ಬಂದಿದ್ದು ರೈತರ ಸಮಸ್ಯೆ ಬಗೆಹರಿಸಲು ಎಂದು ಹೇಳಿದರು.

ಸಾಣೇಹಳ್ಳಿ ಸ್ವಾಮೀಜಿ ವಿರುದ್ದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಸ್ವಾಮೀಜಿಗಳು ಯಾವತ್ತು ರಾಜಕೀಯ ಮಾಡಿಲ್ಲ. ಸಿರಿಗೆರೆ ಶ್ರೀ ಗಳ ಬಗ್ಗೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು ಸರಿಯಲ್ಲ. ಶ್ರೀಗಳು ತಪ್ಪು ಮಾಡಿದವರಿಗೆ ಸರಿ ಹೇಳುವ ಕೆಲಸ ಮಾಡಿದ್ದಾರೆ. ಶ್ರೀಗಳು ರೈತರ ಪರವಾಗಿ ಪ್ರಶ್ನಿಸಿದ್ದಾರೆ ವಿನಃ ಬೇರೆಯದಕ್ಕಲ್ಲ. ಸಾಣೇಹಳ್ಳಿ ಶ್ರೀ ಗಳಿಗೆ ಹಾಗೆ ಮಾತನಾಡಿರುವುದು ಇಡೀ ಹಿಂದು ಮಠದ ಸ್ವಾಮೀಜಿಗಳ ವಿರುದ್ಧ ಮಾತನಾಡಿದಂತೆ ಅಂತ ಕಿಡಿಕಾರಿದ್ರು.

ಅವಕಾಶವಾದಿ ರಾಜಕಾರಣ ಮಾಡುವವರು ಎಲ್ಲಾ ಒಂದಾಗಿದ್ದಾರೆ. ತೃತೀಯ ರಂಗ ಹೋಗಲಿ ದ್ವಿತೀಯ ರಂಗ ಎಲ್ಲಿದೆ. ಕಾಂಗ್ರೆಸ್ ಕೂಡ ತೃತೀಯ ರಂಗದವರ ಜೊತೆ ಸೇರಿಕೊಂಡಿದೆ. ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷದ ಜೊತೆ ಸೇರಿಕೊಂಡಿದೆ. ಕಾಂಗ್ರೆಸ್ ಸಂಪೂರ್ಣ ತನ್ನ ಅಸ್ಥಿತ್ವ ಕಳೆದುಕೊಂಡಿದೆ. ತೃತೀಯ ರಂಗದ ಆಟ ನಡೆಯುವುದಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗುವುದು ಶತಸಿದ್ದ ಎಂದು ಹೇಳಿದರು.

Comments

Leave a Reply

Your email address will not be published. Required fields are marked *