ತಂದೆ, ತಾಯಿ ಒಪ್ಪಿಗೆ ಇಲ್ಲದ ಲವ್ ಮ್ಯಾರೇಜ್- ಸಮ್ಮಿಶ್ರ ಸರ್ಕಾರಕ್ಕೆ ಮಾಜಿ ಶಾಸಕ ಟಾಂಗ್

ಬೆಳಗಾವಿ: ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ ಆಗ್ತಿದ್ದಾರೆ. ಆದ್ರೆ ಇವರ ಮದುವೆಗೆ ತಂದೆ ತಾಯಿಯ ಒಪ್ಪಿಗೆ ಇಲ್ಲ ಅಂತ ಮಾಜಿ ಶಾಸಕ ಸಂಜಯ್ ಪಾಟೀಲ್ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ ಅನಧಿಕೃತವಾಗಿದೆ. ತಂದೆ, ತಾಯಿ ಒಪ್ಪಿಗೆ ಇಲ್ಲದ ಲವ್ ಮ್ಯಾರೇಜ್ ಇದಾಗಿದೆ. ಕರ್ನಾಟಕದ ಜನತೆ ಈ ಮೈತ್ರಿ ಸರ್ಕಾರ ಒಪ್ಪಿಗೆ ನೀಡಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ವಚನ ಭ್ರಷ್ಟ, ಸಿದ್ದರಾಮಯ್ಯ ಮೋಸಗಾರ ಎನ್ನುವುದು ಜಗತ್ತಿಗೆ ಗೊತ್ತಿದೆ. ಡಿ.ಕೆ ಶಿವಕುಮಾರ್ ಅಂತಹ ದೊಡ್ಡ ಕಳ್ಳ ದೇಶದಲ್ಲಿ ಯಾರು ಇಲ್ಲ. ಇವತ್ತು ಎಲ್ಲಾ ಕಳ್ಳರು ಸೇರಿ ಬಿಜೆಪಿ ದೂರವಿಟ್ಟು ಸರ್ಕಾರ ರಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ 6 ತಿಂಗಳಲ್ಲಿ ಡಿವೋರ್ಸ್ ಆಗುತ್ತೆ. ಮತ್ತೆ ರಾಜ್ಯದಲ್ಲಿ ಬಿಎಸ್‍ವೈ ಸರ್ಕಾರ ಅಧಿಕಾರಕ್ಕೆ ಬರಲಿದೆ ಅಂತ ಪಾಟೀಲ್ ಭವಿಷ್ಯ ನುಡಿದಿದ್ದಾರೆ.

Comments

Leave a Reply

Your email address will not be published. Required fields are marked *