ಕರ್ನಾಟಕದಲ್ಲಿ ಕುಮಾರ ಪರ್ವಕ್ಕೆ ಕ್ಷಣಗಣನೆ – ಖಾತೆ ಹಂಚಿಕೆ ಬಗ್ಗೆ ನಾಳೆ ಅಂತಿಮ ಘೋಷಣೆ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪ್ರಕ್ರಿಯೆಯಿಂದ ಕಾಂಗ್ರೆಸ್ ಹೈಕಮಾಂಡ್ ಹಿಂದೆ ಸರಿದಿದೆ. ವಿಧಾನಸೌಧದ ಮುಂಭಾಗ ಬುಧವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲು ತೆರಳಿದ್ದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ತಲೆಹಾಕೋದಿಲ್ಲ ಅಂತ ಸೋನಿಯಾ ಗಾಂಧಿ ಸ್ಪಷ್ಟ ಪಡಿಸಿದ್ದಾರೆ.

ಮೈತ್ರಿ ಸರ್ಕಾರ ರಚನೆಗೆ ಕಾರಣವಾದ ಕಾಂಗ್ರೆಸ್ ಮುಖಂಡರಾದ ಗುಲಾಂ ನಬೀ ಆಜಾದ್, ಅಶೋಕ್ ಗೆಹ್ಲೋಟ್ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಎಲ್ಲವನ್ನೂ ನೋಡಿಕೊಳ್ತಾರೆ ಅಂತ ಸೋನಿಯಾ ಸ್ಪಷ್ಟ ಪಡಿಸಿದ್ದಾರೆ. ಖಾತೆ ಹಂಚಿಕೆ ವಿಚಾರದಲ್ಲೂ ಇವರಿಬ್ಬರ ತೀರ್ಮಾನವೇ ಅಂತಿಮ ಅಂದಿದ್ದಾರೆ. ಇನ್ನೂ, ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಖಾತೆ ಹಂಚಿಕೆ ಬಗ್ಗೆ ನಾಳೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಮಾಯಾವತಿ ಜೊತೆ ಅರ್ಧ ಗಂಟೆ ಚರ್ಚೆ ನಡೆಸಿದ್ರು. ಡೆಲ್ಲಿ ಸಿಎಂ ಕೇಜ್ರಿವಾಲ್ ಸಹ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಲಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಹಾಸನದಲ್ಲಿ ಮಾತನಾಡಿದ್ದ ಎಚ್‍ಡಿಕೆ, ಐದು ವರ್ಷ ಸುಭದ್ರ ಸರ್ಕಾರ ನೀಡುವೆ. ಯಾವುದೇ ಗೊಂದಲ ಇಲ್ಲ. ಅಂದಿದ್ರು. ಅಲ್ಲದೆ, ದೋಸ್ತಿ ಸರ್ಕಾರ ನಿದ್ದೆ ಕೆಡಿಸ್ತೇನೆ ಅಂದಿದ್ದ ರಾಮುಲುಗೆ ಟಾಂಗ್ ಕೊಟ್ರು. ಇತ್ತ, ದೇವನಹಳ್ಳಿ ಬಳಿಯ ರೆಸಾರ್ಟ್ ನಲ್ಲಿಯೇ ಜೆಡಿಎಸ್ ಶಾಸಕರು ವಾಸ್ತವ್ಯ ಮುಂದುವರಿಸಿದ್ದಾರೆ. ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನ ಮತ್ತಷ್ಟು ಬಿಗಿಗೊಳಿಸಿಲಾಗಿದೆ.

Comments

Leave a Reply

Your email address will not be published. Required fields are marked *