ಕೋಲಾರ: ಮೇ 12ರಂದು ಮತದಾನ ಮಾಡಿದ ನಂತರ ಇಬ್ಬರು ಹಳೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿಯ ಕಾಮಸೇನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೃಷ್ಣ ರೆಡ್ಡಿ(24) ಹಾಗೂ ಸುಜಾತ(22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಕಾಮಸೇನಹಳ್ಳಿಯ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಮೃತ ದೇಹಗಳು ಸಿಕ್ಕಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಕೃಷ್ಣ ಹಾಗೂ ಸುಜಾತ 5 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಮನೆಯಲ್ಲಿ ಇವರ ಪ್ರೀತಿಗೆ ಅನುಮತಿ ನೀಡಿರಲಿಲ್ಲ. ಬಳಿಕ ಸುಜಾತ ಕೆಲವು ವರ್ಷಗಳ ಹಿಂದೆ ಬೇರೆಯವರ ಜೊತೆ ಮದುವೆಯಾಗಿದ್ದಳು. ಇನ್ನೂ ಕೃಷ್ಣ ಕೂಡ ನಾಲ್ಕು ತಿಂಗಳ ಹಿಂದೆ ಬೇರೊಬ್ಬರ ಜೊತೆ ಮದುವೆಯಾಗಿದ್ದನು.
ಸುಜಾತಗೆ ಮದುವೆಯಾಗಿ ಮಕ್ಕಳಿದ್ದು, ಕೃಷ್ಣ ರೆಡ್ಡಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿತ್ತು ಎನ್ನಲಾಗಿದೆ. ಈ ಇಬ್ಬರು ಹಳೆ ಪ್ರೇಮಿಗಳಾಗಿದ್ದು, ಮೇ 12ರಂದು ಮತದಾನ ಮಾಡಲು ಸುಜಾತ ಬಂದಿದ್ದಳು. ಆಗ ಪ್ರಿಯಕರನೊಂದಿಗೆ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ನಂಗಲಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply