ಎಚ್‍ಡಿಕೆ ಫುಲ್ ಟರ್ಮ್? ಅಥವಾ 30:30 ಸಿಎಂ? ಅಧಿಕಾರ ಹಂಚಿಕೆ ಹೇಗೆ?

ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಚ್‍ಡಿಕೆ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರಾ? ಅಥವಾ 30 ತಿಂಗಳ ನಂತರ ಕಾಂಗ್ರೆಸ್ ನವರಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತಾ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಎರಡು ಪಕ್ಷದ ನಾಯಕರು ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಂಡಿದ್ದು, ಟಿ-20 ರೀತಿ 30:30 ಅಧಿಕಾರ ಹಂಚಿಕೆ ಸಾಧ್ಯತೆ ಇಲ್ಲವೇ ಇಲ್ಲ. ಕುಮಾರಸ್ವಾಮಿಯವರು ಫುಲ್ ಟರ್ಮ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೇಲುಕೋಟೆ ಶಾಸಕ ಪುಟ್ಟರಾಜು ಹೇಳಿದ್ದಾರೆ.

ಜೆಡಿಎಸ್‍ಗೆ ಕಾಂಗ್ರೆಸ್ ಯಾವುದೇ ಷರತ್ತು ವಿಧಿಸದೇ ಬೆಂಬಲ ನೀಡಿದೆ. ಇಲ್ಲಿ ಯಾವ ಊಹಾಪೋಹಗಳಿಗೂ ಆಸ್ಪದ ಇಲ್ಲ. ಸಚಿವ ಸ್ಥಾನ ಹಂಚಿಕೆ ವಿಚಾರ, ಈಗಾಗಲೇ ಚರ್ಚೆಯಾಗಿದೆ ಎಂದು ಅವರು ತಿಳಿಸಿದರು.

ಮೈತ್ರಿ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಆರಂಭದ 30 ತಿಂಗಳು ಕುಮಾರಸ್ವಾಮಿ, ಮುಂದಿನ 30 ತಿಂಗಳು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

ಅಧಿಕಾರ ಹಂಚಿಕೆ ಹೇಗೆ?
ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಸರ್ಕಾರದ ಸುಗಮ ನಡೆಗಾಗಿ ಸಮನ್ವಯ ಸಮಿತಿ ರಚನೆಯಾಗಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಈ ಬಗ್ಗೆ ಹೆಚ್‍ಡಿಡಿ ಜೊತೆ ಮಾತನಾಡುವುದಾಗಿ ಹೆಚ್‍ಡಿಕೆ ಭರವಸೆ ಕಾಂಗ್ರೆಸ್ ನಾಯಕರಿಗೆ ಭರವಸೆ ನೀಡಿದ್ದಾರೆ.

ಜೆಡಿಎಸ್‍ಗೆ ಮುಖ್ಯಮಂತ್ರಿ ಪಟ್ಟದ ಜೊತೆಗೆ 14 ಸಚಿವ ಸಿಗಲಿದ್ದು, ಕಾಂಗ್ರೆಸ್‍ಗೆ ಒಂದು ಉಪ ಮುಖ್ಯಮಂತ್ರಿ ಸ್ಥಾನ ಸೇರಿ 20 ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತೆ ಕಾಂಗ್ರೆಸ್ ನಿಂದ ಒತ್ತಡ ಇದೆ ಎನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಡಿಸಿಎಂ ಆಗುವ ಸಾಧ್ಯತೆಯಿದೆ.

ಹೆಚ್‍ಡಿಕೆ 5 ವರ್ಷ ಸಿಎಂ ಆಗಿ ಮುಂದುವರೆಯಲು ಕಾಂಗ್ರೆಸ್ ಒಪ್ಪಿಗೆ ನೀಡಿದ ಪರಿಣಾಮ ಖಾತೆ ಹಂಚಿಕೆ ವಿಚಾರದಲ್ಲಿ ದೇವೇಗೌಡರ ರಾಜಿಯಾಗಿದ್ದಾರೆ. ಹಣಕಾಸು, ಇಂಧನ ಹೊರತುಪಡಿಸಿ ಪ್ರಮುಖ ಖಾತೆಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ತೀರ್ಮಾನ ಮಾಡಲಾಗಿದ್ದು, ಶಾಸಕರ ಸಂಖ್ಯೆಗೆ ಅನುಗುಣವಾಗಿ ನಿಗಮ ಮಂಡಳಿಗಳ ಅಧಿಕಾರ ಹಂಚಿಕೆಯಾಗಲಿದೆ.

Comments

Leave a Reply

Your email address will not be published. Required fields are marked *