ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ‘ವಿಜಯಲಕ್ಷ್ಮಿ’ ಒಲಿದು ಇಂದಿಗೆ 15 ವರ್ಷ!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿ ಇಂದಿಗೆ 15 ವರ್ಷಯಾಗಿದೆ. ಇಂದು ದರ್ಶನ್ ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎನ್ನುವುದು ಒಂದು ವಿಶೇಷ ಭಾಗವಾಗಿದ್ದು, ಶ್ರೀಸಾಮಾನ್ಯನೇ ಇರಲಿ ಗಣ್ಯರೇ ಆಗಿರಲಿ ಆ ಮಧುರಗಳಿಗೆಯನ್ನು ಎಂದೆಂದಿಗೂ ಮರೆಯಲಾರರು.

ದರ್ಶನ್ ಮತ್ತು ವಿಜಯಲಕ್ಷ್ಮಿ ಪ್ರೀತಿಸಿ ಮದುವೆಯಾಗಿದ್ದರು. 2000 ಮೇ 19 ರಂದು ದರ್ಶನ್ ಅವರು ವಿಜಯಲಕ್ಷ್ಮಿ ಜೊತೆ ಧರ್ಮಸ್ಥಳದಲ್ಲಿ ಸರಳವಾಗಿ ವಿವಾಹವಾಗಿದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗೆ ಮುದ್ದಾದ ಗಂಡು ಮಗ ವಿನೀಶ್ ಇದ್ದು, ವಿನೀಶ್ ತನ್ನ ತಂದೆ ಜೊತೆ ಐರಾವತ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾನೆ.

ದರ್ಶನ್ ಹುಟ್ಟುಹಬ್ಬವನ್ನು ಆದ್ಧೂರಿಯಿಂದ ಆಚರಿಸುವ ಅಭಿಮಾನಿಗಳು ದರ್ಶನ್ ಅವರ ಮದುವೆ ವಾರ್ಷಿಕೋತ್ಸವೂ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವಾಗಿ ಪರಿಣಮಿಸಿದೆ. ಶನಿವಾರ ಬೆಳ್ಳಂಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ತಮ್ಮ ಡಿ-ಬಾಸ್‍ಗೆ ಶುಭಾಶಯದ ಸುರಿಮಳೆ ಸುರಿಸುತ್ತಿದ್ದಾರೆ.

ಹಿಂದಿನ ಯಾವುದೇ ಸಂದರ್ಭದಲ್ಲೂ ದರ್ಶನ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದ ಉದಾಹರಣೆ ಇಲ್ಲ. ಅದೇ ರೀತಿ ಈ ವರ್ಷವೂ ಆಚರಣೆಯಂತೂ ಮಾಡಿಲ್ಲ. ಆದರೆ ದರ್ಶನ್ ನೋವು ನಲಿವಲ್ಲಿ ಸದಾ ಜೊತೆಗಿರುವ ಅಭಿಮಾನಿಗಳು ಮಾತ್ರ ಸಂಭ್ರಮ ಆಚರಿಸೋದನ್ನು ಮರೆತಿಲ್ಲ.

Comments

Leave a Reply

Your email address will not be published. Required fields are marked *