ಪ್ರಿಯಾ ವಾರಿಯರ್ `ಒರು ಅಡರ್ ಲವ್’ ಸಾಂಗ್ ಟೀಸರ್ ವೈರಲ್

ತಿರುವನಂತಪುರಂ: ಕಣ್ ಸನ್ನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ಪ್ರಿಯಾ ವಾರಿಯರ್ ನಟನೆಯ ಒರು ಅಡರ್ ಲವ್ ಸಿನಿಮಾ ಸಾಂಗ್ ಟೀಸರ್ ಎಲ್ಲೆಡೆ ವೈರಲ್ ಆಗಿದೆ.

ಚಿತ್ರದ `ಮೂನ್ನಲೇ ಪೊನ್ನಲೇ’ ಹಾಡಿನ ಟೀಸರ್ ಬಿಡುಗಡೆಯಾಗಿದ್ದು, ನೋಡುಗರ ಹೈಸ್ಕೂಲ್ ಪ್ರೀತಿಯ ನೆನಪಿನ ಸುರುಳಿಯಲ್ಲಿ ಸುತ್ತುವಂತೆ ಮಾಡುವಂತಿದೆ. ಸದ್ಯ ಬಿಡುಗಡೆಯಾಗಿರುವ ಹಾಡು ತಮಿಳು ಭಾಷೆಯಲ್ಲಿ ಮೂಡಿ ಬಂದಿದೆ. ಮೆ 16ರಂದು ಅಪ್ಲೋಡ್ ಆಗಿರುವ ಯೂಟ್ಯೂಬ್ ವಿಡಿಯೋ 8 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಈ ಹಾಡಿನಲ್ಲಿ ಪ್ರಿಯಾ ವಾರಿಯರ್ ಜೊತೆ ನಟ ರೋಷನ್ ಮತ್ತೊಮ್ಮೆ ಮೋಡಿ ಮಾಡಿದ್ದಾರೆ.

ಸಂಪೂರ್ಣ ಕಾಲಿವುಡ್ ಸಿನಿಮಾ ಶೈಲಿಯಲ್ಲಿ ಮೂಡಿಬಂದಿರುವ ಹಾಡಿನ ಪ್ರತಿ ಸನ್ನಿವೇಶವೂ ಹೊಸತನದಿಂದ ಕೂಡಿದೆ. ಹಾಡಿನ ಸಾಹಿತ್ಯವೂ ಸರಳವಾಗಿದ್ದು, ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ಸಹಾನ್ ರಹಮಾನ್ ತಿಳಿಸಿದ್ದಾರೆ.

ಚಿತ್ರದಲ್ಲಿ ಹಲವು ಪ್ರಮುಖ ಪಾತ್ರಗಳಿದ್ದು, ಪ್ರಿಯಾ ವಾರಿಯರ್ ಹಾಗೂ ರೋಷನ್ ರ ಹಾಡಿನ ಒಂದು ಭಾಗದ ವಿಡಿಯೋವನ್ನು ಈ ಹಿಂದೆ ಚಿತ್ರ ತಂಡ ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ತಮ್ಮ ಕಣ್ ಸನ್ನೆಯ ಮೂಲಕ ಸಿನಿಮಾ ಪ್ರೇಮಿಗಳ ಮನಗೆದ್ದಿದ್ದರು. ಅಲ್ಲದೇ ಬಾಲಿವುಡ್ ರಿಷಿ ಕಪೂರ್, ಟಾಲಿವುಡ್ ಅಲ್ಲು ಅರ್ಜುನ್, ಸಿದ್ದಾರ್ಥ್, ಸೇರಿದಂತೆ ಹಲವು ನಟ ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಿಯಾ ವಾರಿಯರ್ ಗೆ ಶುಭಕೋರಿದ್ದರು.

ಒರು ಅಡರ್ ಲವ್ ಚಿತ್ರದ ಹಾಡು ವೈರಲ್ ಆ ಬಳಿಕ ಪ್ರಿಯಾ ವಾರಿಯರ್ ಹಾಗೂ ರೋಷನ್ ಜೋಡಿಗೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೇ ಕೆಲ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟ ರಾಯಭಾರಿಗಳಾಗಿ ಈ ಜೋಡಿ ಕಾಣಿಸಿಕೊಂಡಿತ್ತು. ಕನ್ನಡ ಚಿತ್ರ ಸೇರಿದಂತೆ ಹಲವು ಸಿನಿಮಾ ರಂಗಗಳಿಂದ ಹೆಚ್ಚಿನ ಆಫರ್ ಗಳು ಬಂದಿದ್ದವು. ಆದರೆ ಒರು ಅಡರ್ ಲವ್ ಸಿನಿಮಾ ಮುಕ್ತಾಯ ವರೆಗೂ ತಾನು ಯಾವುದೇ ಇತರೇ ಸಿನಿಮಾಗಳಿಗೆ ಸಹಿ ಮಾಡುವುದಿಲ್ಲ ಎಂದು ಪ್ರಿಯಾ ವಾರಿಯರ್ ತಿಳಿಸಿದ್ದರು.

Comments

Leave a Reply

Your email address will not be published. Required fields are marked *