ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

ವಿಜಯಪುರ: ರಾಜ್ಯ ಹಾಗೂ ವಿಜಯಪುರ ಜಿಲ್ಲೆಯೆ ಹೈ ವೋಲ್ಟೇಜ್ ಮತಕ್ಷೇತ್ರ ಬಬಲೇಶ್ವರದಲ್ಲಿ 80% ಮತದಾನವಾಗಿದೆ. ಇದೇ ಮೊದಲನೆ ಬಾರಿಗೆ ಈ ಮಟ್ಟಕ್ಕೆ ಮತದಾನವಾಗಿದ್ದು, ಕಾಂಗ್ರೆಸ್ ಭಾರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ಹೇಳಿದ್ದಾರೆ.

ನನ್ನ ಮತಕ್ಷೇತ್ರದಲ್ಲಿ ಹೆಚ್ಚು ಮತದಾನ ಆಗಿದ್ದು ಖುಷಿ ಆಗಿದೆ. ನನ್ನ ವಿರುದ್ಧ ಹಲವು ಷಡ್ಯಂತ್ರ ಮಾಡಲಾಗಿದೆ. ನನ್ನ ಸೋಲಿಸಲು ವಿರೋಧ ಪಕ್ಷದವರು ಅನೇಕ ತಂತ್ರ ಕುತಂತ್ರಗಳನ್ನು ಮಾಡಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದರು. ಅದರ ಲಾಭ ನನಗೆ ಆಗಲಿದೆ. ಇದಕ್ಕೆ ಉತ್ತರ 15 ಕ್ಕೆ ಸಿಗಲಿದೆ ಕಾದು ನೋಡಿ ಎಂದರು.

ರಾಜ್ಯದಲ್ಲಿ 120 ಸೀಟ್ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಮಾತನಾಡಿದ ಅವರು, ಬಿಎಲ್‍ಡಿಇ ಸಂಸ್ಥೆಯ ನೋಟ್‍ಪ್ಯಾಡ್ ನಲ್ಲಿ ನನ್ನ ನಕಲಿ ಸಹಿ ಮಾಡಲಾಗಿದೆ. ನಕಲಿ ಸಹಿ ಮಾಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕಳಿಸಲಾಗಿದೆ. ಇದರ ಹಿಂದೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಕೈವಾಡವಿದೆ. ಅವರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳತ್ತೇನೆ ಅಂದ್ರು.

Comments

Leave a Reply

Your email address will not be published. Required fields are marked *