ಕಿಚ್ಚ ಸುದೀಪ್‍ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರರು!

ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಸಹೋದರರು ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

ಇತ್ತೀಚೆಗೆ ಸಲ್ಮಾನ್ ಖಾನ್ ಸಹೋದರರು ಸೋಹೆಲ್ ಖಾನ್ ಬೆಂಗಳೂರಿಗೆ ಬಂದಿದ್ದರು. ಆಗ ಕಿಚ್ಚನನ್ನು ಭೇಟಿ ಮಾಡಿದ್ದಾರೆ. ಇದೊಂದು ಸಾಮಾನ್ಯ ಭೇಟಿ ಎಂದು ಹೇಳಲಾಗಿದೆ. ಕಿಚ್ಚನನ್ನು ಭೇಟಿ ಮಾಡಲು ಸೋಹೆಲ್‍ಗೆ ತನ್ನ ಸಹೋದರ ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಕೂಡ ಸಾಥ್ ನೀಡಿದ್ದರು.

ಭೇಟಿ ಹಿನ್ನೆಲೆ: ಕರ್ನಾಟಕದಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಸ್ಯಾಂಡಲ್‍ವುಡ್ ತಾರೆಯರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಬಾಲಿವುಡ್ ಕಲಾವಿದರಾದ ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಕೂಡ ಕರ್ನಾಟಕ ಚುನಾವಣೆಯಲ್ಲಿ ಪ್ರಚಾರ ಮಾಡಲು ಬೆಂಗಳೂರಿಗೆ ಬಂದಿದ್ದರು. ಎಂಇಪಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಬಂದಿದ್ದ ವೇಳೆ ಇವರಿಬ್ಬರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಸಿಸಿಎಲ್ ಪಂದ್ಯ ಶುರುವಾದಾಗಿನಿಂದಲೂ ಸುದೀಪ್ ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ತುಂಬಾ ಆತ್ಮೀಯವಾಗಿ ಇರುತ್ತಾರೆ.

ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಜೊತೆ ಸುದೀಪ್ ಸೆಲ್ಫಿ ತೆಗೆದುಕೊಂಡು ಅದನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ನನ್ನ ಸಹೋದರರಾದ ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಜೊತೆ ಕೆಲ ಕಾಲ ಕಳೆದಿದ್ದು ಖುಷಿಯಾಯಿತ್ತು. ಮುಂದೆ ಕೂಡ ಈ ರೀತಿಯ ಭೇಟಿಗಾಗಿ ಕಾಯುತ್ತಿದ್ದೇನೆ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

ಕಿಚ್ಚನ ಜೊತೆ ಸ್ಯಾಂಡಲ್‍ವುಡ್ ನಟ ಚಂದನ್, ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಐಪಿಎಲ್ ಆಟಗಾರ ಕಾರಿಯಪ್ಪ ಹಾಗೂ ಕ್ರಿಕೆಟರ್ ರಿತೇಶ್ ಭಟ್ಕಳ್ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *