ಸ್ವಕ್ಷೇತ್ರದಲ್ಲೇ ಸಚಿವ ರೈಗೆ ವಿರೋಧ- ಕಾರ್ಯಕ್ರಮಕ್ಕೆ ತೆರಳಿದ್ದಾಗ ಮೋದಿ ಮೋದಿ ಅಂತ ಘೋಷಣೆ ಕೂಗಿದ ಜನ

ಮಂಗಳೂರು: ಅರಣ್ಯ ಸಚಿವ ರಮಾನಾಥ ರೈಗೆ ಸ್ವಕ್ಷೇತ್ರದಲ್ಲಿಯೇ ವಿರೋಧ ಎದುರಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರೋಪಾಡಿಯಲ್ಲಿ ಕಾರ್ಯಕ್ರಮವೊಂದಕ್ಕೆ ರಮಾನಾಥ ರೈ ತೆರಳಿದ್ದಾಗ ಮೋದಿ, ಮೋದಿ ಘೋಷಣೆ ಮೊಳಗಿದೆ.

ರೈ ಅವರನ್ನು ಅಡ್ಡಗಟ್ಟಿ ನೂರಾರು ಮಂದಿ ಘೋಷಣೆ ಕೂಗಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಸಚಿವರು ಸ್ಥಳದಲ್ಲಿಯೇ ಮೌನವಾಗಿ ನಿಂತುಬಿಟ್ಟ ಪ್ರಸಂಗ ನಡೆಯಿತು. ಈ ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

ಎರಡು ವರ್ಷಗಳ ಹಿಂದೆ ಕರೋಪಾಡಿ ಪಂಚಾಯತ್ ಉಪಾಧ್ಯಕ್ಷ ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಕೊಲೆ ನಡೆದಿತ್ತು. ರಮಾನಾಥ ರೈ ಆಪ್ತನಾಗಿದ್ದ ಜಲೀಲ್ ಕೊಲೆ ಪ್ರಕರಣ ಸ್ಥಳೀಯವಾಗಿ ಕಾಂಗ್ರೆಸ್ ವಿರೋಧಿ ಧೋರಣೆಗೆ ಕಾರಣವಾಗಿದೆ ಎನ್ನಲಾಗಿದೆ.

ಸಚಿವ ರಮಾನಾಥ ರೈ ನೈಜ ಆರೋಪಿಗಳನ್ನು ಪತ್ತೆಹಚ್ಚಲು ಸಹಕರಿಸಿಲ್ಲವೆಂಬ ಆರೋಪವೂ ಕೇಳಿಬಂದಿತ್ತು. ಸ್ಥಳೀಯ ಮುಸ್ಲಿಮರು ಕೂಡ ಅಂದು ರಮಾನಾಥ ರೈಗೆ ಘೆರಾವ್ ಹಾಕಿದ್ದರು. ಇದೀಗ ಖಾಸಗಿ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ರಮಾನಾಥ ರೈ ವಿರುದ್ಧ ಮೋದಿ ಘೋಷಣೆ ಕೇಳಿಬಂದಿದೆ.

https://twitter.com/mac_thimmaiah/status/993395057355993088

Comments

Leave a Reply

Your email address will not be published. Required fields are marked *