ಕ್ರೈಂ ಸಿಟಿ ಅನ್ನೋ ಮೂಲಕ ಬೆಂಗ್ಳೂರಿಗರಿಗೆ ಅವಮಾನ- ಮೋದಿಗೆ ಸಿಎಂ ಟ್ವೀಟ್

ಬೆಂಗಳೂರು: ರಾಜಧಾನಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಐದು ಅಂಶಗಳ ಪಂಚ್ ನೀಡಿದ್ದ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಟ್ವೀಟೇಟು ನೀಡಿದ್ದಾರೆ.

ಮೋದಿಯವರ ಭಾಷಣದ ಕೆಲ ಅಂಶಗಳನ್ನು ಅಸ್ತ್ರವಾಗಿಸಿಕೊಂಡು ಟ್ವಿಟ್ಟರ್ ನಲ್ಲಿ ವಿಜೃಂಭಿಸಿದ್ದಾರೆ. ಪ್ರಧಾನಿ ಮೋದಿ ಪದೇ ಪದೇ ತಮ್ಮ ಹುದ್ದೆಯ ಘನತೆಯನ್ನು ಮರೆತು ಮಾತನಾಡುತ್ತಿರೋದು ನಿರಾಸೆ ಉಂಟು ಮಾಡಿದೆ. ಡೈನಾಮಿಕ್ ನಗರಿ ಬೆಂಗಳೂರನ್ನು ಅಪರಾಧಗಳ ನಗರಿ, ಪಾಪದ ಕಣಿವೆ ಅಂತಾ ಹೇಳೋ ಮೂಲಕ ಬೆಂಗಳೂರಿಗರನ್ನು ಪ್ರಧಾನಿ ಅವಮಾನಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಇದನ್ನೂ ಓದಿ: Steel ಬ್ರಿಡ್ಜ್ ಅಲ್ಲ, ಅದು Steal ಬ್ರಿಡ್ಜ್- ಕೈ ಸರ್ಕಾರದಿಂದ ಬೆಂಗ್ಳೂರಿಗೆ 5 ಕೊಡುಗೆ: ಮೋದಿ

ಈ ಮೂಲಕ ಎಲೆಕ್ಷನ್ ಸನಿಹದಲ್ಲಿ ಭಾವನಾತ್ಮಕ ದಾಳ ಉರುಳಿಸಿದ್ದಾರೆ. ಇನ್ನು ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿಗೆ ಸಿಕ್ಕ ಗರಿಮೆಗಳು ಏನು ಅನ್ನೋದನ್ನು ಪಟ್ಟಿ ಮಾಡಿ ಪ್ರಧಾನಿ ಮೋದಿ ಸಿಎಂ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

ಪ್ರಧಾನಿ ಮೋದಿ ಆರೋಪ
* ಸಿಲಿಕಾನ್ ವ್ಯಾಲಿಯೀಗ ಶಾಪದ ಕಣಿವೆ
* ಗಾರ್ಡನ್ ಸಿಟಿಯೀಗ ಗಾರ್ಬೆಜ್ ಸಿಟಿ
* ಕಂಪ್ಯೂಟರ್ ರಾಜಧಾನಿಯೀಗ ಕ್ರೈಂ ರಾಜಧಾನಿ
* ಐಕ್ಯತೆಯ ಮಹಾನಗರಿಯೀಗ ಗೊಂದಲದ ಗೂಡು
* ಸ್ಟಾರ್ಟ್‍ಅಪ್ ಹಬ್ ಈಗ ಪಾಟ್‍ಹೋಲ್ ಹಬ್
* ಹೊಸ ವರ್ಷದಲ್ಲಿ ಮಹಿಳೆಯರಿಗೆ ಇಲ್ಲಿ ರಕ್ಷಣೆ ಇಲ್ಲ
* ಬೆಳ್ಳಂದೂರು ಕೆರೆ ಮಲೀನ.. ಬೆಂಕಿ

ಸಿಎಂ ತಿರುಗೇಟು
* ಜಗತ್ತಿನಲ್ಲೇ ಮೋಸ್ಟ್ ಡೈನಾಮಿಕ್ ಸಿಟಿ
* ಗಾರ್ಬೇಜ್ ಸಿಟಿ ಆಗಿದ್ದು ಬಿಎಸ್‍ವೈ ಅವಧಿಯಲ್ಲಿ
* ವಿಶ್ವದ ಟಾಪ್ 25 ಹೈಟೆಕ್ ಸಿಟಿಗಳಲ್ಲಿ ಒಂದು
* ವಿಶ್ವದ ಟಾಪ್ ಐದು ಸಂಶೋಧನಾ ಹಾಟ್ ಸ್ಟಾಟ್‍ಗಳಲ್ಲಿ ಒಂದು
* ವಿಶ್ವಸಂಸ್ಥೆ ಮೆಚ್ಚುವ ರೀತಿ ಟೆಂಡರ್‍ಶ್ಯೂರ್ ರೋಡ್‍ಗಳ ನಿರ್ಮಾಣ
* ವೃತ್ತಿನಿರತ ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ ತಾಣ
* ಅತಿ ವೇಗವಾಗಿ ಬೆಳೆಯುತ್ತಿರುವ ಹೈಟೆಕ್ ಸಿಟಿಗಳ ಪೈಕಿ ಒಂದು

Comments

Leave a Reply

Your email address will not be published. Required fields are marked *