ಸಿದ್ದಲಿಂಗಯ್ಯ ಮನೆಗೆ ಶಾ – ಕುಡಿಯುವ ನೀರಿನ ಬಾಟಲಿಗೆ ಬಗ್ಗೆ ಫೇಸ್‍ಬುಕ್‍ನಲ್ಲಿ ಟೀಕೆ, ನಿಂದನೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಲಿತ ಕವಿ ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಟೀಕೆ ವ್ಯಕ್ತವಾಗಿದೆ.

ಬುಧವಾರ ಅಮಿತ್ ಶಾ ಹಿರಿಯ ಸಾಹಿತಿ ಚಿದಾನಂದ ಮೂರ್ತಿ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡುವ ಮೂಲಕ ಪ್ರಣಾಳಿಕೆಗಾಗಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ಸಿದ್ದಲಿಂಗನವರನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಟೀಕೆ ಮಾಡುತ್ತಿದ್ದಾರೆ.

ಯಾರಿಗೆ ಬಂತು ಎಲ್ಲಿಗೆ ಬಂತು ಸ್ವಾತಂತ್ರ್ಯ ಅಂತಾ ಆಡಳಿತವನ್ನು ಪೆನ್ನಿನ ಮೂಲಕ ಟೀಕಿಸುತ್ತಿದ್ದ ಸಿದ್ದಲಿಂಗಯ್ಯ ಇವತ್ತು ಗೂಟದ ಕಾರಿನ ಮೋಹಕ್ಕೆ ಬಲಿಯಾದ್ರಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಮನೆಗೆ ಭೇಟಿ ನೀಡಿದ ಶಾಗೆ ಚಿದಾನಂದ ಮೂರ್ತಿ ನೀಡಿದ್ರು 5 ಸಲಹೆ

ಈ ಟೀಕೆಯ ಜೊತೆಗೆ ಸಿದ್ದಲಿಂಗಯ್ಯರ ಮನೆಯಲ್ಲಿ ಅಮಿತ್ ಶಾ ಅವರಿಗೆ ಬಾಟಲ್ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ ಕೆಲವರು ಸಿದ್ದಲಿಂಗಯ್ಯ ದಲಿತ ವ್ಯಕ್ತಿಯೆಂದು ಅವರ ಮನೆಯಲ್ಲಿ ನೀರು ಕುಡಿಯಲಿಲ್ಲವೋ ಅಥವಾ ಸಿದ್ದಲಿಂಗಯ್ಯರ ಮನೆಯಲ್ಲಿ ಬಾಟಲ್ ನೀರನ್ನು ಕುಡಿಯುತ್ತಿರಬಹುದು ಎಂದು ಬರೆದುಕೊಂಡಿದ್ದಾರೆ.

ಮಠಾಧೀಶರ ಬಳಿಕ ಅಮಿತ್ ಶಾ ಈಗ ಸಾಹಿತಿಗಳನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.

Comments

Leave a Reply

Your email address will not be published. Required fields are marked *