ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದ್ರು ಅವರ ಪರ ಪ್ರಚಾರ ಮಾಡ್ತೇನೆ- ರಮ್ಯಾ ತಾಯಿ!

ಮಂಡ್ಯ: ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದರು ಅವರ ಪರ ಮಂಡ್ಯಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದು ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಸರಿಯಾಗಿ ಗುರುತಿಸುತ್ತಿಲ್ಲ ಎಂದು ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದ ರಂಜಿತ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಬುಧವಾರ ಮಂಡ್ಯಕ್ಕೆ ಆಗಮಿಸಿ ಅಧಿಕೃತವಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರು.

ಹಿರಿಯ ನಾಯಕರು, ಹಿತೈಷಿಗಳ ಸಲಹೆಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಮುಂಬರುವ ದಿನಗಳಲ್ಲಿ ಪಕ್ಷದಿಂದ ಸೂಕ್ತ ಅವಕಾಶ ಸಿಗುವ ಭರವಸೆಯಿದೆ. ಬುಧವಾರ ಬಸವ ಜಯಂತಿ. ಈ ಶುಭದಿನದಿಂದ ಕಾಂಗ್ರೆಸ್ ಪರ ಪ್ರಚಾರ ಮಾಡಲು ಬಂದಿದ್ದೇನೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷದಿಂದ ಯಾರೇ ಸ್ಪರ್ಧಿಸಿದ್ದರು ಅವರ ಪರ ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ರಂಜಿತ ತಿಳಿಸಿದ್ದಾರೆ.

ಇದೇ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಆಗಮಿಸುವ ಬಗ್ಗೆ ಮಾತನಾಡಿದ ಅವರು, ರಮ್ಯಾ ಅವರ ಹೆಸರು ಸ್ಟಾರ್ ಕ್ಯಾಂಪೇನ್ ಲಿಸ್ಟ್ ನಲ್ಲಿದೆ. ಅವರು ಎಲ್ಲ ಕಡೆ ಬಂದು ಪ್ರಚಾರ ಮಾಡುತ್ತಾರೆ. ಖಂಡಿತ ಮಂಡ್ಯಕ್ಕೆ ಬಂದು ಪ್ರಚಾರ ಮಾಡ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರ ಯೋಜನೆಗಳನ್ನು ಹಾಡಿ ಹೊಗಳಿದ ರಂಜಿತ, ಸಿಎಂ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಎಲ್ಲ ರೀತಿಯ ಭಾಗ್ಯ ಕೊಟ್ಟಿದ್ದಾರೆ. ಜನರು ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾರೆ. ಕಾಂಗ್ರೆಸ್ ಪಕ್ಷದ ಪರ ಯಾರೇ ನಿಂತರೂ ಗೆಲ್ಲುತ್ತಾರೆ. ಖಂಡಿತ ಈ ಬಾರೀ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗಲೇ ರಮ್ಯಾ ತಾಯಿ ಕೈ ವಿರುದ್ಧ ಅಪಸ್ವರ ಎತ್ತಿದ್ದೇಕೆ?

https://youtu.be/uwuE6Mz5wVU

Comments

Leave a Reply

Your email address will not be published. Required fields are marked *