ಕಾರ್ಯಕ್ರಮದಲ್ಲಿ ರಕ್ಷಿತಾ ಪ್ರೇಮ್ ಮೇಲೆ ಕೋಪಗೊಂಡು ಸಿಡಿದ ಶಿವಣ್ಣ!

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಮೇಲೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಕೋಪಗೊಂಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಕ್ಷಿತಾ ಪ್ರೇಮ್, ಶಿವಣ್ಣನಿಗೆ ‘ಫಾದರ್ ಫಿಗರ್’ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಕೇಳಿ, ಇದು ನನಗೆ ಅವಮಾನ ಎಂದು ಶಿವಣ್ಣ ಕೋಪಗೊಂಡರು.

ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ನಟಿ ರಕ್ಷಿತಾ ಪ್ರೇಮ್ ಹಾಗೂ ರಾಗಿಣಿ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ನಿರೂಪಕರಾಗಿರುವ ಶಿವರಾಜ್ ಕುಮಾರ್ ಸತ್ಯ ಅಥವಾ ಧೈರ್ಯ(ಟ್ರೂತ್ ಆರ್ ಡೇರ್) ಸೆಗ್ಮೆಂಟ್ ಶುರು ಮಾಡಿದ್ದರು.

ಸತ್ಯ ಅಥವಾ ಧೈರ್ಯದಲ್ಲಿ ಸತ್ಯವನ್ನು ಆಯ್ಕೆ ಮಾಡಿಕೊಂಡ ರಕ್ಷಿತಾ ಅವರಿಗೆ ಶಿವರಾಜ್ ಕುಮಾರ್ ನೀವು ಯಾರ ಜೊತೆ ಮತ್ತೆ ಸಿನಿಮಾ ಮಾಡಲು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ ಚಾಲೆಜಿಂಗ್ ಸ್ಟಾರ್ ದರ್ಶನ್ ಹೆಸರನ್ನು ಹೇಳಿದ್ದಾರೆ.

ಶಿವಣ್ಣ ಇದ್ದಕ್ಕೆ ಪ್ರತಿಕ್ರಿಯಿಸಿ ನಿಮ್ಮ ಜೋಡಿ ಚೆನ್ನಾಗಿದೆ ಎಂದು ಹೇಳಿದ್ದಾರೆ. ನಂತರ ನನ್ನ ಜೊತೆ ಸಿನಿಮಾ ಮಾಡಲ್ವಾ ಎಂದು ಕೇಳಿದಾಗ, ನೀವು ನನಗೆ ಫಾದರ್ ಫಿಗರ್ ಎಂದು ರಕ್ಷಿತಾ ಉತ್ತರಿಸಿದ್ದಾರೆ.

ರಕ್ಷಿತಾ ಅವರ ಉತ್ತರ ಕೇಳಿ ಶಿವಣ್ಣ ಶಾಕ್ ಆಗಿ ಇದು ಅನ್ಯಾಯ. ಇದು ನನಗೆ ಅವಮಾನ. ಇವತ್ತಿನ ಶೂಟಿಂಗ್ ಕ್ಯಾನ್ಸಲ್ ಮಾಡಿ, ಲೈಟ್ ಆಫ್ ಎಂದು ಶಿವಣ್ಣ ತಮ್ಮ ಜಾಗದಿಂದ ಎದ್ದುಬಿಟ್ಟರು. ಆಗ ರಕ್ಷಿತಾ, ಅಣ್ಣ ಓಕೆ ಅಣ್ಣ. ನೀವು ನನ್ನ ಬಾಯ್‍ಫ್ರೆಂಡ್ ಕೂತ್ಕೊಳ್ಳಿ, ಕಾಲಿಗೆ ಬೀಳ್ತೀನಿ ಎಂದು ಹೇಳಿದ್ದರು. ಆಗ ಲೈಟ್ಸ್ ಆನ್ ಮಾಡಿದ್ದರು.

ನಾನು ಫಾದರ್ ಫಿಗರ್ ಹೇಗೆ ಹೇಳಿದೆ ಎಂದು ಶಿವಣ್ಣ ಪ್ರಶ್ನಿಸಿದ್ದಾಗ ಸ್ಕ್ರೀನ್ ಮೇಲೆ ರೋಮ್ಯಾನ್ಸ್ ಮಾಡಬೇಕು ಎಂದಾಗ ನನಗೆ ಆ ಭಾವನೆ ಬರುವುದಿಲ್ಲ ಎಂದು ರಕ್ಷಿತಾ ತಿಳಿಸಿದ್ದರು. ಇದನ್ನು ಕೇಳಿ ಶಿವರಾಜ್‍ಕುಮಾರ್ ಖುಷಿಯಾದರು.

Comments

Leave a Reply

Your email address will not be published. Required fields are marked *