ಬೆಂಗಳೂರು: ಅಭಿಮಾನಿಯೊಬ್ಬರು ಚಾಲೆಜಿಂಗ್ ಸ್ಟಾರ್ ದರ್ಶನ್‍ರನ್ನು ಫಾಲೋ ಮಾಡಿದ್ದಕ್ಕೆ ನನ್ನನ್ನು ಫಾಲೋ ಮಾಡ್ಬೇಡ ಎಂದು ಬೈದು ಬುದ್ದಿವಾದ ಹೇಳಿದ ಘಟನೆ ಬೆಳಕಿಗೆ ಬಂದಿದೆ.
ದರ್ಶನ್ ಪರ್ಸನಲ್ ಕೆಲಸಕ್ಕೆ ಹೊರಗಡೆ ಹೊರಟರೆ ಇತ್ತೀಚೆಗೆ ಖರೀದಿಸಿದ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಆದೇ ರೀತಿ ಮೊನ್ನೆ ಮೈಸೂರಿನ ಸುತ್ತಮುತ್ತ ಹೋಗಿದ್ದಾರೆ. ಆಗ ಅಭಿಮಾನಿಯೊಬ್ಬರು ಕಾರು ಹಿಂದೆ ಹಿಂದೆಯೇ ಫಾಲೋ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.

ಆಗ ಕೊಪಗೊಂಡ ದರ್ಶನ್ ಕಾರ್ ನಿಲ್ಲಿಸಿ ಆ ಅನಾಮಿಕ ಅಭಿಮಾನಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಅಪ್‍ಲೋಡ್ ಮಾಡಿ ದಯವಿಟ್ಟು ಯಾರು ಈ ರೀತಿ ತೊಂದರೆ ಕೊಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
ಸದ್ಯ `ಯಜಮಾನ’ ಚಿತ್ರದ ಶೂಟಿಂಗ್‍ನಲ್ಲಿರುವ ದರ್ಶನ್ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಸಾಮಾಜಿಕ ಕಳಕಳಿಯ ಸಮಾಚಾರಗಳ ಜೊತೆಗೆ ಈಗ `ಕುರುಕ್ಷೇತ್ರ’ ಮೇಕಿಂಗ್‍ನಿಂದಲೂ ಸದ್ದು ಮಾಡುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ಮಹತ್ವಾಕಾಂಕ್ಷೆ `ಮುನಿರತ್ನ ಕುರುಕ್ಷೇತ್ರ’ ರಿಲೀಸ್‍ಗೆ ಸಿದ್ಧವಾಗುತ್ತಿದ್ದು, ಅದ್ಧೂರಿ ಮೇಕಿಂಗ್‍ನಿಂದ ಸದ್ದು ಮಾಡುತ್ತಿದೆ.
https://twitter.com/DTEAM7999/status/985453036792360961

Leave a Reply