ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

– ಸಿಎಂಗೆ ಬದಾಮಿ ಇಲ್ಲ; ಚಾಮುಂಡಿಯೇ ಗತಿ

ನವದೆಹಲಿ: ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿತ್ತು, ಆದೆ ಈಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಎಲ್ಲಾ 218 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದೆ. ಆದ್ರೆ ಆರು ಕ್ಷೇತ್ರಗಳ ಪಟ್ಟಿ ಮಾತ್ರ ರಿಲೀಸ್ ಆಗಿಲ್ಲ. ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿಯಿಂದ ಮಾತ್ರ ಕಣಕ್ಕಿಳಿಯುತ್ತಾರೆ. ಬದಾಮಿಯಿಂದ ಸಿಎಂಗೆ ಟಿಕೆಟ್ ಕೊಡೋದು ಬೇಡ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.

ಹೆಚ್.ಎಂ.ರೇವಣ್ಣಗೆ ಚನ್ನಪಟ್ಟಣದ ಟಿಕೆಟ್ ಸಿಕ್ಕಿದೆ. ಇನ್ನೋರ್ವ ಎಂಎಲ್‍ಸಿ ಎಂ.ಆರ್.ಸೀತಾರಾಮ್ ಮಲ್ಲೇಶ್ವರಂನಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಇನ್ನು ವಯಸ್ಸು, ಆರೋಗ್ಯ ಮತ್ತು ಇತರೆ ಕಾರಣಗಳ ನೆಪ ಒಡ್ಡಿ ಓರ್ವ ಮಂತ್ರಿಯೂ ಸೇರಿದಂತೆ ಹಲವು ಮಾಜಿ ಮಂತ್ರಿಗಳು, ಶಾಸಕರಿಗೆ ಟಿಕೆಟ್ ನೀಡಿಲ್ಲ. ಆದಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಮಕ್ಕಳನ್ನು ಗೆಲ್ಲಿಸಿಕೊಂಡು ಬರುವ ರಾಜಕಾರಣಿಗಳ ಬಲಾಬಲವನ್ನು ಅಳೆದೂತೂಗಿದ ಸ್ಕ್ರೀನಿಂಗ್ ಕಮಿಟಿ ಕೆಲವರ ಮಕ್ಕಳಿಗೆ ಮಾತ್ರ ಟಿಕೆಟ್ ನೀಡಿದೆ.

 

Comments

Leave a Reply

Your email address will not be published. Required fields are marked *