ಸಿನಿಮಾ ಪ್ರಚಾರಕ್ಕಾಗಿ ಪೊಲೀಸ್ ಠಾಣೆಗೆ ಬೆತ್ತಲಾಗಿ ಬಂದ ನಾಯಕ ನಟ

ಬೆಂಗಳೂರು: ಒಂದು ಸಿನಿಮಾ ಮಾಡುವವರು ಪ್ರಚಾರಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಚಿತ್ರ ಸೆಟ್ಟೇರಿದಾಗಿನಿಂದಲೂ ಸಿನಿಮಾದ ತಾರಾಬಳಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಹಾಕಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ತಲುಪಿಸುತ್ತಾರೆ. ಇನ್ನು ಕೆಲವರು ಸಿನಿಮಾದ ಪ್ರಚಾರಕ್ಕಾಗಿ ಕ್ವಿಜ್, ಲಕ್ಕಿ ಡಿಪ್ ಸೇರಿದಂತೆ ಹಲವು ಟೆಕ್ನಿಕ್ ಬಳಸುವುದಂಟು.

ಇಂದು ಸ್ಯಾಂಡಲ್‍ವುಡ್ ನಲ್ಲಿ ನಿರ್ಮಾಣವಾಗುತ್ತಿರುವ `ರೌಡಿ ಸುಬ್ಬು’ ಸಿನಿಮಾ ಇಂದು ಮುಹೂರ್ತ ಆಚರಿಸಿಕೊಳ್ಳಿತು. ಸಿನಿಮಾದ ಮೊದಲ ಸೀನ್ ನ್ನು ಪೊಲೀಸ್ ಠಾಣೆಯಲ್ಲಿ ಶೂಟ್ ಮಾಡಲಾಯಿತು. ನಿರ್ದೇಶಕ ಪ್ರಸಾದ್ ಆ್ಯಕ್ಷನ್ ಅಂತಾ ಹೇಳುತ್ತಿದ್ದಂತೆ ನಾಯಕ ನಟ ವರ್ಧನ್ ಬೆತ್ತಲಾಗಿ ಎಂಟ್ರಿ ಕೊಡುವ ಮೂಲಕ ನೆರದಿದ್ದವರಿಗೆ ಶಾಕ್ ಕೊಟ್ಟರು. ಇದನ್ನೂ ಓದಿ: ಸಿನಿಮಾ ಪ್ರಚಾರಕ್ಕಾಗಿ ಹಲ್ಲೆಯ ಡ್ರಾಮಾ ಮಾಡಿದ್ರಾ  ನಾಗವಲ್ಲಿ ವರ್ಸಸ್ ಆಪ್ತಮಿತ್ರ-2 ಚಿತ್ರದ ನಾಯಕ ಕಾರ್ತಿಕ್ ವಿಕ್ರಂ?

ಚಿತ್ರ ನೈಜವಾಗಿ ಮೂಡಿ ಬರಲೆಂದು ನಾಯಕ ಬೆತ್ತಲಾಗಿ ಬಂದ್ರು ಅಂತಾ ಚಿತ್ರತಂಡ ಸ್ಪಷ್ಟನೆ ನೀಡಿದೆ. ಸಿನಿಮಾದ ಮೊದಲ ಸೀನ್ ಹೀಗಿದೆ ಅಂದ್ರೆ ಇನ್ನು ಚಿತ್ರ ಹೇಗೆ ಮೂಡಿ ಬರಲಿದೆ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿವೆ.

Comments

Leave a Reply

Your email address will not be published. Required fields are marked *