ವಿಂಡೋ ಗ್ಲಾಸ್ ಒಡೆದು ಕಾರಿನೊಳಗೆ ತಲೆದೂರಿಸಿ ಆಹಾರ ಪಾಕೆಟ್ ಕಿತ್ತುಕೊಂಡ ಜಿರಾಫೆ-ವಿಡಿಯೋ ನೋಡಿ

ಲಂಡನ್: ಸಫಾರಿ ಕಾರಿನ ಗ್ಲಾಸ್ ಒಡೆದ ಜಿರಾಫೆಯೊಂದು ಆಹಾರದ ಪೊಟ್ಟಣವನ್ನು ಎತ್ತಿಕೊಂಡಿರುವ ವಿಚಿತ್ರ ಘಟನೆ ಇಂಗ್ಲೆಂಡಿನ ವೆಸ್ಟ್ ಮಿಡ್‍ಲ್ಯಾಂಡ್ ನ ವರ್ಸೆಸ್ಟಶೈರ್ ನಲ್ಲಿ ಸೋಮವಾರ ನಡೆದಿದೆ.

ಕಾರಿನಲ್ಲಿ ಸಫಾರಿ ಮಾಡುವ ವೇಳೆ ಎದುರಿಗೆ ಬಂದ ಜಿರಾಫೆಗೆ ಆಹಾರ ನೀಡಲು ದಂಪತಿ ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಆಹಾರದ ಪೊಟ್ಟಣಗಳನ್ನು ನೋಡಿದ ಜಿರಾಫೆ ಕಾರಿನೊಳಗೆ ತನ್ನ ತಲೆಯನ್ನು ತೂರಿಸಿದೆ. ಇದ್ರಿಂದ ಭಯಗೊಂಡ ಕಾರಿನಲ್ಲಿದ್ದ ಮಹಿಳೆ ಕಾರಿನ ಕಿಟಕಿಯ ಗ್ಲಾಸ್ ಮೇಲೆರಿಸಲು ಪ್ರಯತ್ನಿಸಿದ್ದಾರೆ. ಜಿರಾಫೆಗೆ ತಗುಲಿದ ಗ್ಲಾಸ್ ಒಡೆದು ಚೂರು ಚೂರಾಗಿದೆ.

ಈ ಎಲ್ಲ ದೃಶ್ಯಗಳನ್ನು ಪಕ್ಕದ ಸಫಾರಿ ಕಾರಿನಲ್ಲಿದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಸಂಬಂಧ ಸಫಾರಿ ಉದ್ಯಾನದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದ್ದು ಮತ್ತು ಜಿರಾಫೆಗೆ ಯಾವುದೇ ರೀತಿಯಲ್ಲಿ ಅಪಾಯಗಳಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪಾರ್ಕ್ ನಿಯಮವೇನು?: ವರ್ಸೆಸ್ಟಶೈರ್ ಪಾರ್ಕ್ ನಲ್ಲಿ ಸಫಾರಿ ಮಾಡುವ ಜನರು ಕಾರಿನ ಕಿಟಕಿಯ ಅರ್ಧ ಗ್ಲಾಸ್ ಮಾತ್ರ ತೆಗೆಯಬೇಕು. ಇದರ ಮೂಲಕವೇ ಸಫಾರಿಯಲ್ಲಿ ಎದುರಾಗುವ ಜಿರಾಫೆಗಳಿಗೆ ಆಹಾರವನ್ನು ನೀಡಬಹುದು ಎನ್ನುವ ನಿಯಮವಿದೆ.

ದಂಪತಿ ಕಾರಿನ ವಿಂಡೋ ಪೂರ್ಣ ಪ್ರಮಾಣದಲ್ಲಿ ತೆರೆದು ಆಹಾರವನ್ನು ತೋರಿಸಿ ಜಿರಾಫೆಯನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಜಿರಾಫೆ ತಮ್ಮ ಹತ್ರ ಬರುತ್ತಿದ್ದಂತೆ ದಂಪತಿ ನಗುತ್ತಾ ಅದಕ್ಕೆ ಆಹಾರ ನೀಡಲು ಮುಂದಾಗಿದ್ದಾರೆ. ಆಹಾರದ ಪೊಟ್ಟಣಕ್ಕೆ ಕಣ್ಣು ಹಾಕಿದ ಜಿರಾಫೆ ಕಾರಿನ ಒಳಗೆಯೇ ತಲೆಯನ್ನ ತೂರಿಸಿದ್ದರಿಂದ ಈ ಅವಘಡ ನಡೆದಿದೆ.

ನಾನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಜಿರಾಫೆಯನ್ನ ನನ್ನ ಹತ್ತಿರ ಸೆಳೆಯುವ ಪ್ರಯತ್ನ ಮಾಡಿದೆ. ಆದರೆ ಜಿರಾಫೆ ಪಕ್ಕದ ಕಾರಿನತ್ತ ಹೋಯಿತು. ಕಾರಿನಲ್ಲಿದ್ದ ದಂಪತಿ ಜಿರಾಫೆ ತಮ್ಮತ್ತ ಬರುತ್ತಿದ್ದಂತೆ ಖುಷಿಯಿಂದ ನಗಲಾರಂಭಿಸಿದ್ರು. ಯಾವಾಗ ಜಿರಾಫೆ ತನ್ನ ಕತ್ತನ್ನ ಕಾರಿನೊಳಗೆ ಸೇರಿಸಿತೋ ಭಯಗೊಂಡ ದಂಪತಿ ಗ್ಲಾಸ್ ಮೇಲೆ ಮಾಡಿದ್ದರಿಂದ ಅದು ಚೂರು ಚೂರಾಯಿತು. ಗ್ಲಾಸ್ ಒಡೆದಿದ್ದರಿಂದ ಜಿರಾಫೆಗೆ ಯಾವುದೇ ಅಪಾಯವಾಗಿಲ್ಲ. ಆದ್ರೆ ಕಾರಿನಲ್ಲಿದ್ದವರಿಗೆ ತರಚಿದ ಗಾಯಗಳಾಗಿವೆ. ಕಾರಿನ ಗ್ಲಾಸ್ ತೆಗೆಯಬಾರದು ಎಂಬ ನಿಯಮವಿದ್ದರೂ ದಂಪತಿ ವಿಂಡೋ ಓಪನ್ ಮಾಡಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದು ವಿಡಿಯೋ ಮಾಡಿದ ವ್ಯಕ್ತಿ ಹೇಳಿದ್ದಾನೆ.

Comments

Leave a Reply

Your email address will not be published. Required fields are marked *