ಬ್ಯಾಗ್ ಪಕ್ಕದಲ್ಲೇ ಮಹಿಳೆ ಕುಳಿತಿದ್ದರೂ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾದ ಕಳ್ಳ – ವಿಡಿಯೋ ನೋಡಿ

ಶಿವಮೊಗ್ಗ: ಬ್ಯಾಂಕಿನಿಂದ ಹೊರಟ ಮಹಿಳೆಯೊಬ್ಬರು ತನ್ನ ಬ್ಯಾಗ್ ಪಕ್ಕದಲ್ಲೇ ಕುಳಿತಿದ್ದರೂ, ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ವಿನೋಬಾ ನಗರ ಮಮತಾ ಬ್ಯಾಂಕಿಗೆ ಹೋಗಿ 25 ಸಾವಿರ ಹಣ ಡ್ರಾ ಮಾಡಿ ಹೋಟೆಲ್ ಗೆ ಬಂದಿದ್ದರು. ಈ ವೇಳೆ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಮೂವರು ಖದೀಮರು ಮಹಿಳೆ ಕೂಳಿತಿದ್ದ ಟೇಬಲ್ ನ ಅಕ್ಕ-ಪಕ್ಕ ಕೂತಿದ್ದಾರೆ. ಇವರಲ್ಲಿ ಒಬ್ಬ ನೋಟುಗಳನ್ನು ಕೆಳಗೆ ಬೀಳಿಸಿ, ಈ ಮಹಿಳೆಯ ಗಮನ ಸೆಳೆಯುತ್ತಾನೆ.

ಈ ವೇಳೆ ಮಹಿಳೆ ಇತ್ತ ನೋಡುತ್ತಿದ್ದಂತೆ ಪಕ್ಕದಲ್ಲಿ ಇಟ್ಟಿದ್ದ ಬ್ಯಾಗ್ ನ್ನು ಇನ್ನೊಬ್ಬ ಎಗರಿಸಿ ಪರಾರಿ ಆಗುತ್ತಾನೆ. ಮಹಿಳೆ ಇದನ್ನು ಗಮನಿಸುವಷ್ಟರಲ್ಲಿ ಇನ್ನೊಬ್ಬ ಕೆಳಗೆ ಬಿದ್ದ ನೋಟುಗಳತ್ತ ಅವರನ್ನು ಸೆಳೆಯುತ್ತಾನೆ. ಅಷ್ಟರಲ್ಲಾಗಲೇ ಕಳ್ಳ ಬ್ಯಾಗ್ ನೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಖತರ್ನಾಕ್ ಕಳ್ಳರ ಕೈಚಳಕದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

https://www.youtube.com/watch?v=c1CH1Gc6rOY

Comments

Leave a Reply

Your email address will not be published. Required fields are marked *