ಜಗತ್ತಿನ ಸುಂದರ ಸ್ಥಳದಲ್ಲಿ ಮದ್ವೆಗೆ ಪ್ಲಾನ್ ಮಾಡಿದ ಸೋನಮ್ ಕಪೂರ್!

ಮುಂಬೈ: ಬಾಲಿವುಡ್ ಮೋಸ್ಟ್ ಹ್ಯಾಂಡ್‍ಸಮ್ ಸ್ಟಾರ್ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಅವರು ಮೇ ತಿಂಗಳಲ್ಲಿ ಬಹು ದಿನಗಳ ಗೆಳಯ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ಮದುವೆಯಾಗಲಿದ್ದಾರೆ.

ನಟಿ ಅನುಷ್ಕಾ ಶರ್ಮಾ ರೀತಿಯಲ್ಲಿಯೇ ವಿದೇಶದಲ್ಲಿ ಮದುವೆ ಆಗಲು ಇವರೂ ಕೂಡ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಸೋನಮ್ ರಾಜಸ್ಥಾನದ ಜೋಧ್‍ಪುರ್ ಬಳಿಯ ಉದಯಪುರದಲ್ಲಿ ಮದುವೆ ಆಗ್ತಾರೆ ಅಂತಾ ಹೇಳಲಾಗುತ್ತಿತ್ತು. ಸದ್ಯ ಮದುವೆಯ ಸ್ಥಳವನ್ನು ಸೋನಮ್ ಇಚ್ಛೆಯ ಮೇರೆಗೆ ಬದಲಾವಣೆ ಮಾಡಲಾಗಿದೆ. ಅನುಷ್ಕಾ ರೀತಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆಯಾದ ನಂತರ ಭಾರತದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ಜಗತ್ತಿನ ಸುಂದರ ಸ್ಥಳದಲ್ಲಿ ಸಪ್ತಪದಿ: ಮೂಲಗಳ ಪ್ರಕಾರ ಸೋನಮ್ ಮತ್ತು ಆನಂದ್ ಮದುವೆ ಮೇ 9ರಿಂದ 12ರವರೆಗೆ ನಡೆಯಲಿದೆ ಅಂತಾ ತಿಳಿದುಬಂದಿದೆ. ವಿಶ್ವದ ಸುಂದರಾತೀತ ಸ್ಥಳಗಳಲ್ಲೊಂದಾದ ಸ್ವಿಡ್ಜರ್‍ಲೆಂಡ್ ನ ಮಾಂಟ್ರೀಕ್ಸ್ ನಗರದಲ್ಲಿ ಜೋಡಿ ಸಾಂಸರಿಕ ಜೀವನಕ್ಕೆ ಕಾಲಿರಸಲಿದ್ದಾರೆ. ಮಾಂಟೋ ನಗರದಲ್ಲಿ ನಡೆಯುವ ಮದುವೆಯಲ್ಲಿ ಕೇವಲ ಆನಂದ್ ಮತ್ತು ಸೋನಮ್ ಕುಟುಂಬಸ್ಥರು ಹಾಗು ಆಪ್ತಮಿತ್ರರಿಗೆ ಮಾತ್ರ ಆಹ್ವಾನ ನೀಡಲಾಗುವುದು ಎನ್ನಲಾಗಿದೆ.

ಸೋನಮ್ ನಟನೆ ವೀರೆ ದಿ ವೆಡ್ಡಿಂಗ್ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ಒಂದು ತಿಂಗಳ ಕಾಲ ಮದುವೆ ತಯಾರಿಯಲ್ಲಿ ಬ್ಯುಸಿಯಾಗಲಿದ್ದಾರೆ.

Comments

Leave a Reply

Your email address will not be published. Required fields are marked *