ಪಿಎಂ ಆಗಿರೋವಾಗ ಅವರು ಉಲ್ಲಂಘಿಸಿರಬೇಕು : ಎಚ್‍ಡಿಡಿಗೆ ಸಿಎಂ ತಿರುಗೇಟು

ಬೆಂಗಳೂರು: ನೀತಿ ಸಂಹಿತೆ ಜಾರಿ ಆದ ಬಳಿಕ ಯಾರು ನಮ್ಮ ಮನೆಗೆ ಬಂದಿಲ್ಲ. ಮುಖ್ಯ ಕಾರ್ಯದರ್ಶಿ ಬಿಟ್ಟು ಬೇರೆಯಾರು ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನೀತಿ ಸಂಹಿತೆ ಜಾರಿಯಾದ ಬಳಿಕವೂ  ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪಿಎಂ ಆದಾಗ ಅವರು ಮಾಡಿರಬೇಕು. ಹೀಗಾಗಿ ಆ ರೀತಿ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಭ್ರಮಾಲೋಕದಲ್ಲಿ ಇದ್ದಾರೆ. ಇವರೆಲ್ಲ ಭ್ರಮಾಲೋಕದಲ್ಲಿ ತೇಲಾಡೋದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ ಎಂದರು.

ನನ್ನನ್ನು ಸೋಲಿಸಲು ಮತ್ತೊಮ್ಮೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಈಗ ಒಂದಾಗಿರಬೇಕು. 2006 ರಲ್ಲಿ ನನ್ನನ್ನು ಸೋಲಿಸಲು ಒಂದಾಗಿದ್ದರು. ಆಗ ಏನಾಯಿತು? ಚುನಾವಣೆಯಲ್ಲಿ ನಾನು ಗೆದ್ದಿದ್ದೆ. ಈಗ ಮತ್ತೆ ನಾನೇ ಗೆಲ್ಲೋದು. ನನ್ನನ್ನು ಸೋಲಿಸುವುದೇ ಅವರ ಗುರಿ ಅಂತೆ. ನಮಗೂ ಸೋಲಿಸುವುದು ಗೊತ್ತು. ಮತ ಕೊಡುವುದು ಮತದಾರರು ಅನ್ನುವುದನ್ನು ಮರೆಯುವುದು ಬೇಡ ಎಂದು ಇಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಹೇಳಿದಂತೆ ನಡೆಯಬೇಕು. ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಸುಪ್ರೀಂ ಕೋರ್ಟ್ ಒಂದು ಸಮಿತಿ ನೇಮಕ ಮಾಡಲು ಹೇಳಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಜಾರಿಗೆ ಈ ಸಮಿತಿ ಸಹಾಯವಾಗಲಿದೆ. ತಮಿಳುನಾಡಿನ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *