ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪಕ್ಷದ ನಾಯಕರುಗಳು ಪರಸ್ಪರ ಟಾಂಗ್ ಕೊಡುತ್ತಿದ್ದಾರೆ. ಇದೀಗ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿಯವರಿಗೆ ಟಾಂಗ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಸಿಎಂ ಅವರನ್ನು ಕಾಲೆಳೆದ ಸಿಂಹ, `ಮೌಢ್ಯವಿರೋಧಿಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯ.. ಕೈಯಲ್ಲಿ ನಿಂಬೆಹಣ್ಣು ಹಿಡಿದು ಪ್ರಚಾರ ಯಾಕಯ್ಯ?. ಅಂತ ಪ್ರಶ್ನಿಸಿ ಮುಖ್ಯಮಂತ್ರಿಯವರಿಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ತಮ್ಮ ಹೆಸರನ್ನ ಸಿದ್ದರಾವಣಯ್ಯ ಎಂದು ಇಟ್ಟುಕೊಳ್ಳಲಿ: ಪ್ರತಾಪ್ ಸಿಂಹ
`ಒಬ್ಬ ಹಿಂದೂ ವಿರೋಧಿ ಬಾಯಲ್ಲಿ ರಾಮನಿದ್ದಾನೆ ಎಂದು ಹೇಳಿಸಿದ, ಸೋಲಿನ ಭೀತಿ ಹುಟ್ಟಿಸಿ ಕೈಯಲ್ಲಿ ನಿಂಬೆ ಹಣ್ಣು ಹಿಡಿಸಿದ ಕರ್ನಾಟಕದ ಸಮಸ್ತ ಹಿಂದೂಗಳಿಗೂ ಧನ್ಯವಾದಗಳು’ ಅಂತ ಸಿಎಂ ನಿಂಬೆಹಣ್ಣು ಹಿಡಿದಿರುವ ಫೋಟೋ ಹಾಕಿ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಒಬ್ಬ ಹಿಂದೂ ವಿರೋಧಿಯ ಬಾಯಲ್ಲಿ ನನ್ನ ಹೆಸರಲ್ಲೂ “ರಾಮ”ನಿದ್ದಾನೆ ಎಂದು ಹೇಳಿಸಿದ, ಸೋಲಿನ ಭೀತಿ ಹುಟ್ಟಿಸಿ ಕೈಯಲ್ಲಿ ನಿಂಬೆ ಹಣ್ಣು ಹಿಡಿಸಿದ ಕರ್ನಾಟಕದ ಸಮಸ್ತ ಹಿಂದೂಗಳಿಗೂ ಧನ್ಯವಾದಗಳು! pic.twitter.com/Dnx57g7QeD
— Prathap Simha (@mepratap) April 5, 2018

Leave a Reply