ಲೈಂಗಿಕ ಕಿರುಕುಳ ನೀಡ್ತಿದ್ದ ಸಿಆರ್ ಪಿ ಅಧಿಕಾರಿ ವಿರುದ್ಧ ದೂರು ಸಲ್ಲಿಸಿದ ಶಿಕ್ಷಕಿಗೆ ಸಿಕ್ಕಿಲ್ಲ ನ್ಯಾಯ

ಯಾದಗಿರಿ: ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಒಂದು ವರ್ಷದ ಹಿಂದೆ ಸಿಆರ್ ಪಿ ಅಧಿಕಾರಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದರು. ಆದ್ರೆ ಇದೂವರೆಗೂ ಸಂತ್ರಸ್ತೆ ಶಿಕ್ಷಕಿಗೆ ನ್ಯಾಯ ಮಾತ್ರ ಸಿಕ್ಕಿಲ್ಲ.

ಯಾದಗಿರಿ ತಾಲೂಕಿನ ಯರಗೋಳ ಶಿಕ್ಷಣ ಇಲಾಖೆಯ ಎಚ್. ಶರಣಪ್ಪ ಎಂಬ ಅಧಿಕಾರಿ ತನಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಅಂತಾ ಸಂತ್ರಸ್ತೆ ಮುಖ್ಯಮಂತ್ರಿ ಕಾರ್ಯದರ್ಶಿ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಜೂನ್ 10, 2017ರಂದು ಲಿಖಿತ ದೂರು ನೀಡಿದ್ದರು. ದೂರು ಸಲ್ಲಿಸಿ ಒಂದು ವರ್ಷವಾದ್ರೂ ಯಾವ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯಾದಗಿರಿ ಜಿಲ್ಲಾ ಪಂಚಾಯಿತ ಸಿಇಓ ಅವಿನಾಶ್ ಮೆನನ್, ತಕ್ಷಣವೇ ಸಿಆರ್ ಪಿಓ ಮೇಲೆ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೊಂದ ಸಂತ್ರಸ್ತೆ ಸೇರಿದಂತೆ ಸಹ ಶಿಕ್ಷಕರನ್ನು ಈ ಪ್ರಕರಣದ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಲು ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಡಿಡಿಪಿಐ ಕಚೇರಿ ಆದೇಶಿಸಿದ್ದಾರೆ. ಆದೇಶದ ಅನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *