ಪ್ರೀತಿಸಿ ಮನೆಬಿಟ್ಟು ಹೋಗಿದ್ದ ಅಪ್ರಾಪ್ತೆಯನ್ನು ಮದ್ವೆ ವೇಳೆ ರಕ್ಷಿಸಿದ್ರು!

ಕಾರವಾರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಮದುವೆಯನ್ನು ನಿಲ್ಲಿಸಿ ಬಾಲಕಿಯನ್ನು ರಕ್ಷಣೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕಾರವಾರದ ಹಬ್ಬುವಾಡದ 17 ವರ್ಷದ ಪಿಯು ವಿದ್ಯಾರ್ಥಿನಿ ಬಂಗಾರಪ್ಪ ನಗರದ ನಿವಾಸಿ ಇಂಬ್ರಾನ್ ಇಮಾಮ್ ಸಾಬ್ ಶೇಖ್ ಎಂಬುವವನನ್ನು ಪ್ರೀತಿಸುತಿದ್ದಳು. ಆದರೆ ಬಾಲಕಿಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಮೂರು ದಿನಗಳ ಹಿಂದೆ ಬಾಲಕಿ ಮನೆ ಬಿಟ್ಟು ಪ್ರಿಯಕರನ ಮನೆಯಲ್ಲಿ ತಂಗಿದ್ದಳು.

ನಂತರ ಯುವಕನ ಪೋಷಕರು ನಗರದ ಮದೀನಾ ಜಮಾಯಿತ್ ಮಸೀದಿಯಲ್ಲಿ ಧರ್ಮ ಗುರುಗಳ ಮುಂದೆ ವಿವಾಹ ನೆರವೇರಿಸಲು ಇಂದು ತೆರಳಿದ್ದರು. ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ಯುವಕನನ್ನು ಪೊಲೀಸರ ವಶಕ್ಕೆ ನೀಡಿ, ಬಾಲಕಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ನಂತರ ಬಾಲಕಿಯನ್ನು ಜಿಲ್ಲಾ ಬಾಲಮಂದಿರಲ್ಲಿ ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *